ರಾಜಕೀಯ
ನಾಳೆ ಮಾತುಕತೆ ನಡೆಸಿ ಅತೃಪ್ತ ಶಾಸಕರನ್ನು ಮುಂಬೈನಿಂದ ವಾಪಸ್ ಕರೆತರರ್ತಾರಾ ಟ್ರಬಲ್ ಶೂಟರ್?
ಸುದ್ದಿದಿನ, ಬೆಂಗಳೂರು : ಬಿಜೆಪಿ ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆಯಲು ‘ಕೈ’ ತಂತ್ರವೊಂದನ್ನು ಹೆಣೆದಿದ್ದು ಮುಂಬೈನಲ್ಲಿರುವ ಕೈ ಅತೃಪ್ತರನ್ನ ಕರೆತರ್ತಾರಾ ಡಿಕೆಶಿ ಎನ್ನುವ ಮಾತುಗಳು ರಾಜಕೀಯವಲಯದಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಶಾಸಕರನ್ನ ಪಕ್ಷದಲ್ಲೇ ಉಳಿಸಿಕೊಳ್ಳುವ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್, ಹೀಗಾಗಿ ನಾಳೆ ಮುಂಬೈಗೆ ತೆರಳುತ್ತಿದ್ದಾರೆ. ಮುಂಬೈನಲ್ಲಿ ನಡೆಯುವ ಇರಿಗೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನೆಪದಲ್ಲಿ ಮುಂಬೈ ಭೇಟಿ ನೀಡುತ್ತಿರುವ ಡಿ.ಕೆ.ಶಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಅಂದಹಾಗೆ ನಾಳೆ ಮಾತುಕತೆ ನಡೆಸಿ ವಾಪಸ್ ಕರೆತರರ್ತಾರಾ ಟ್ರಬಲ್ ಶೂಟರ್? ಎಂಬ ಪ್ರಶ್ನೆಯೊಂದು ಎದ್ದಿದೆ.
ನಾಲ್ವರು ಮುಂಬೈನಲ್ಲಿರುವ ಬಗ್ಗೆ ಮಾಹಿತಿಯಿದೆ ಎಂದಿರುವ ಡಿಕೆಶಿ ಹೀಗಾಗಿಯೇ ನಾಳೆ ಮುಂಬೈಗೆ ತೆರಳ್ತಿದ್ದಾರಾ? ಕಾದು ನೋಡಬೇಕಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ‘ಯಾವಾಗ ಏನ್ಮಾಡ್ಬೇಕು ಅಂತಾ ನಮಗೂ ಗೊತ್ತಿದೆ. ರಾಜಕೀಯ ಹೇಗೆ ಮಾಡ್ಬೇಕು ಅನ್ನೋದು ಗೊತ್ತಿದೆ ಎಂದಿದ್ದಾರೆ ಡಿಕೆಶಿ. ಹಾಗೇ ದೆಹಲಿ, ಮುಂಬೈನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಅನ್ನೋ ವಿಚಾರ, ಈಗ ಮಾತನಾಡಲು ಸಮಯವಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ಮಾತಾಡ್ತೇನೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401