ರಾಜಕೀಯ

13 ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ರಚಿಸೋದು ಖಚಿತ..!?

Published

on

ಸುದ್ದಿದಿನ,ಬೆಂಗಳೂರು :ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ. ದೋಸ್ತಿ ಸರ್ಕಾರ ಉರುಳೋಕೆ ಶುರುವಾಗಿದೆ ಕೌಂಟ್​ಡೌನ್. ಕಾಂಗ್ರೆಸ್​ ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಮಾಸ್ಟರ್​ ಪ್ಲಾನ್ ​ನಡೆಸಿದ್ದು, ಸಮ್ಮಿಶ್ರ ಸರ್ಕಾರ ಕೆಡವಲು ನಿನ್ನೆ ರಾತ್ರಿಯೇ ಮುಂಬೈನಲ್ಲಿ ​ಮೀಟಿಂಗ್​ ನಡೆದಿದೆ.

ಶ್ರೀರಾಮುಲು ಜತೆ ಕಾಂಗ್ರೆಸ್​ ಅತೃಪ್ತ ಶಾಸಕರ ಮಾತುಕತೆ ಆಗಿದ್ದು, ಮುಂಬೈನ ರಿನೈಸ್ಸೆನ್ಸ್ ಹೋಟೆಲ್​ನಲ್ಲಿ ಫೈನಲ್​ ಹಂತ ತಲುಪಿದೆ ಬಿಜೆಪಿ ಆಪರೇಷನ್. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಕೊನೆ ಹಂತದ ಡಿಮ್ಯಾಂಡ್​ ಇಟ್ಟಿದ್ದಾರೆ. ಕಾಂಗ್ರೆಸ್​ ನ ಅತೃಪ್ತ ಶಾಸಕರು. ಕಾಂಗ್ರೆಸ್​ ಶಾಸಕರ ಬೇಡಿಕೆಗೆ ಬಹುತೇಕ ಸಮ್ಮತಿ ಕೊಟ್ಟ ಬಿಜೆಪಿ, ಇಂದು ಸಂಜೆಯೊಳಗೆ ಆ 13 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.

ನಂಬರ್​ ಗೇಮ್​ ತಲುಪುವ ಹಂತದಲ್ಲಿ ಬಿಜೆಪಿ ಪಡೆಯಿದ್ದು, 13 ಜನ ಅತೃಪ್ತ ಶಾಸಕರು ರಾಜೀನಾಮೆ ಕೊಟ್ರೆ ದೋಸ್ತಿ ಸರ್ಕಾರ ಖತಂ ಆಗುದು ಗ್ಯಾರಂಟಿ ಅಂತಿದಾರೆ ಬಿಜೆಪಿ ಮಂದಿ. ಈಗಾಗಲೇ ಬಿಜೆಪಿ ಕಡೆ ವಾಲಿರುವ ಇಬ್ಬರು ಪಕ್ಷೇತರ ಶಾಸಕರು, 120 ಶಾಸಕರ ಮೈತ್ರಿಯಿಂದ ಇಬ್ಬರು ಹೋದರೆ ಆಗ 118 ಆಗಲಿದೆ. 13 ಶಾಸಕರು ಕಾಂಗ್ರೆಸ್ ತೊರೆದರೆ ಆಡಳಿತ ಪಕ್ಷ 105ಕ್ಕೆ ಕುಸಿಯಲಿದೆ.

224ರಲ್ಲಿ 13 ಶಾಸಕರು ರಾಜೀನಾಮೆ ನೀಡಿದರೆ ಮ್ಯಾಜಿಕ್ ಸಂಖ್ಯೆ 106 ಆಗಲಿದ್ದು, 104 ಸದಸ್ಯರು ಹೊಂದಿರುವ ಬಿಜೆಪಿಗೆ ಇಬ್ಬರು ಸೇರಿದರೆ ಸದಸ್ಯ ಬಲ 106 ಆಗಲಿದೆ. 13 ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ರಚಿಸೋದು ಖಚಿತವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version