ರಾಜಕೀಯ

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿರುವವರಿಗೆ ಬಂಪರ್​​ ಆಫರ್..!

Published

on

ಸುದ್ದಿದಿನ,ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿರುವವರಿಗೆ ಬಂಪರ್​​ ಆಫರ್ ನೀಡಲಾಗಿದೆಯಂತೆ. 50 ಕೋಟಿ ರೂಪಾಯಿ ಕ್ಯಾಶ್​, ನಿಗಮಮಂಡಳಿ ಹುದ್ದೆ. ಇಲ್ಲವೇ 25 ಕೋಟಿ ರೂಪಾಯಿ ಕ್ಯಾಶ್​, ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ.

ಹೀಗೆ, ರಾಜೀನಾಮೆ ಕೊಟ್ಟರೆ ಬಿಜೆಪಿ ಟಿಕೆಟ್ ಖಚಿತ, ಚುನಾವಣೆ ವೆಚ್ಚ ಬಿಜೆಪಿಯೇ ಭರಿಸಲಿದೆಯಂತೆ. ಲೋಕಸಭೆ ಚುನಾವಣೆ ಜತೆಗೆ ಅಸೆಂಬ್ಲಿ ಚುನಾವಣೆ ನಡೆಸಲು ಮುಂದಾಗಿರುವ ಬಿಜೆಪಿ ಈ ಆಫರ್​​ಗಳನ್ನು ಕಾಂಗ್ರೆಸ್,ಜೆಡಿಎಸ್ ಶಾಸಕರಮುಂದಿಡುತ್ತಿರುವ ಬಿಜೆಪಿ ನಾಯಕರು. ಕೆಲವರಿಗೆ ನಿನ್ನೆ ರಾತ್ರಿಯೇ ಹಣ ಪಾವತಿ ಮಾಡಿರುವ ಬಿಜೆಪಿ ನಾಯಕರು. ಮಹಾರಾಷ್ಟ್ರ ಸಿಎಂ ಫಡ್ನವೀಸ್,ಕೇಂದ್ರ ಸಚಿವ ಗಡ್ಕರಿ ಶಾಸಕರ ಜತೆ ಒನ್​ ಟು ಒನ್ ಮಾತುಕತೆ ನಡೆದಿದೆ.

ಆಫರ್​​ಗಳಿಗೆ ಬಲಿಯಾದ ಕಾಂಗ್ರೆಸ್​ ಅತೃಪ್ತ ಶಾಸಕರು, ಜೆಡಿಎಸ್​ ಶಾಸಕರಿಗೂ ಬರ್ತಿವೆ ಈ ಆಫರ್​​. ಇಂದು ಸಂಜೆ ವೇಳೆಗೆ ಈ ಆಫರ್​​​​ ಬಗ್ಗೆ ಪ್ರತಿಕ್ರಿಯಿಸಲಿದ್ದಾದೆ ನಾಲ್ವರು ಜೆಡಿಎಸ್​ ಎಂಎಲ್​ಗಳು. ಕಾಂಗ್ರೆಸ್ ಸೇರಲಿದ್ದಾರೆ ಎಂಬ ಆರು ಬಿಜೆಪಿ ಶಾಸಕರ ಮೇಲೂ ಬಿಜೆಪಿ ನಿಗಾವಹಿಸಿದೆ. 6 ಮಂದಿ ಬಿಜೆಪಿ ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ ಐಬಿ(ಗುಪ್ತದಳ).
ಮತ್ತೊಂದೆಡೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಹಿರಿಯ ಬಿಜೆಪಿ ನಾಯಕರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version