ರಾಜಕೀಯ

ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರು ; ಬಿಜೆಪಿ ತೆಕ್ಕೆಯಲ್ಲಿರುವ ಶಾಸಕರು ಯಾರು ಗೊತ್ತಾ..?

Published

on

ಸುದ್ದಿದಿನ ಡೆಸ್ಕ್ : ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರುವಾದಂತಿದೆ. ಮೈತ್ರಿಸರ್ಕಾರದ 18 ಹೊರನಡೆಯಲು ಸಿದ್ದರಾಗಿದ್ದು,ಇನ್ನು ಐದು ದಿನಗಳೊಳಗೆ ರೆಸಾರ್ಟ್ ಸೇರಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಂಬೈಗೆ ಶಿಫ್ಟ್ ಆಗಲಿವೆ 2 ತಂಡಗಳು. ಇವರ ಜೊತೆ ಬಿಜೆಪಿ ನಿರಂತರ ಸಂಪರ್ಕ ಹೊಂದಿದೆ ಎಂಬ ಮಾಹಿಲಿ ಲಭ್ಯವಾಗಿದೆ.

ಬೆಳಗಾವಿ, ಬಳ್ಳಾರಿ , ರಾಯಚೂರು, ಕೋಲಾರ್ , ಭಾಗದ ಶಾಸಕರ ತಂಡವು ಬಿ.ಎಸ್.ವೈ ಗೆ ಸಿಎಂ ಪಟ್ಟ ಕಟ್ಟಲು ಸಿದ್ಧತೆ ನಡೆಸಿದ್ದು, ಸಂಪುಟ ವಿಸ್ತರಣೆ ಸದ್ಯಕ್ಕೆ ಡೌಟ್ ಆಗಿದೆ. ಕ್ಷೇತ್ರಗಳಿಗೆ ಅನುದಾನ ಕೊಡ್ತಿಲ್ಲ ಎಂದು ಶಾಸಕರು ಕಿಡಿಕಾರಿರುವ ಹಿನ್ನೆಲೆಯಲ್ಲಿ ಅಧಿವೇಶನಕ್ಕೂ ಮುನ್ನ ಸರ್ಕಾರ ಪತನ ವಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಬಿಜೆಪಿ ಒಟ್ಟು 18 ಶಾಸಕರ ಜೊತೆ ಸಂಪರ್ಕವಿದ್ದು, 8 ಶಾಸಕರಿಗೆ ಸಚಿವ ಸ್ಥಾನದ ಆಫರ್ ಕೊಡಲಾಗಿದೆಯಾ? 10 ಶಾಸಕರಿಗೆ ದೊಡ್ಡ ಆರ್ಥಿಕ ಸಹಾಯ ? ನೀಡಲಿದೆಯಾ ? ಯಾರೆಲ್ಲಾ ಬಿಜೆಪಿ ಕಡೆ ಹೋಗ್ತಿದ್ದಾರೆ? ಆಪರೇಷನ್ ಕಮಲ ಸುಳಿಯಲ್ಲಿ ಯಾರು? ಎಂಬ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ದೊರೆಯಲಿದೆ.

ಯಾರೆಲ್ಲಾ ಬಿಜೆಪಿ ಕಡೆ ಹೋಗ್ತಿದ್ದಾರೆ ?

ಕಂಪ್ಲಿ ಶಾಸಕ ಗಣೇಶ್ , ರಾಯಚೂರು ಗ್ರಾಮಾಂತರ ಶಾಸಕ ಬಸವರಾಜ್ ದದ್ದಲ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ , ಲಿಂಗಸಗೂರು ಶಾಸಕ ಡಿಎಸ್ ಹುಲಗೇರಿ , ಕಾಗವಾಡ ಶಾಸಕ ಶ್ರೀಮಂತ ಪಾಟೀಲ. ಅಥಣಿ ಶಾಸಕ ಮಹೇಶ್ ಕಮಟಹಳ್ಳಿ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ , ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ , ಸಚಿವ ರಮೇಶ್ ಜಾರಕಿಹೊಳಿ , ಚಿಕ್ಕಬಳ್ಳಾಪುರ ಶಾಸಕ ಸುಧಾಕರ್.

ಅತೃಪ್ತರ ಜೊತೆ ಬಿಜೆಪಿ ಸತತ ಸಂಪರ್ಕವಿದ್ದು, ಜೆಡಿಎಸ್ ನ ಕೆಲವರ ಜೊತೆ ಬಿಜೆಪಿ ಸಂಪರ್ಕ‌ವಿಟ್ಟಿಕೊಂಡಿದೆ ಎಂದು ತಿಳಿದು ಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್ |9986715401

Trending

Exit mobile version