ಸಿನಿ ಸುದ್ದಿ

‘ಕೆಜಿಎಫ್’ ಗೆ ಅನಂತನಾಗ್ ನಿರೂಪಣೆ..!

Published

on

ಸುದ್ದಿದಿನ,ಬೆಂಗಳೂರು: ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಎರಡನೇ ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು, ಮೂರೇ ದಿನಗಳಲ್ಲೇ 7.4 ಮಿಲಿಯನ್ ವೀವ್ಸ್’ಗಳಾಗಿವೆ. ಚಿತ್ರದ ಹಿಂದಿ ಆವೃತ್ತಿ ಟ್ರೈಲರ್‍ನಲ್ಲಿ ಅನಂತನಾಗ್ ಅವರ ನಿರೂಪಣೆ ಇದೆ. ಡಿಸೆಂಬರ್ 21ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಕೆಜಿಎಫ್‍ಗೆ ತಮಿಳು ಮತ್ತು ತೆಲುಗು ಸಿನಿಮಾ ಪ್ರೇಕ್ಷಕ ರಿಂದಲೂ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಎರಡನೇ ಟ್ರೈಲರ್ ಸಿನಿಮಾ ರಂಗದಲ್ಲಿ ಭಾರಿ ಹವಾ ಎಬ್ಬಿಸಿದೆ.

ಚಿತ್ರದ ಬಿಡುಗಡೆ ಎಕ್ಸೆಲ್ ಮೂವೀಸ್ ನಿರ್ಮಾಣದ ಕೆಜಿಎಫ್‍ ಚಿತ್ರದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಪ್ರಶಾಂತ್ ನೀಲ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ರವಿ ಬಸ್ರೂರ್ ಅವರ ಸಂಗೀತ ಚಿತ್ರಕ್ಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version