ದಿನದ ಸುದ್ದಿ
ದಾವಣಗೆರೆ | ಗಂಡನನ್ನೇ ಕಿಡ್ನಾಪ್ ಮಾಡಿಸಿದ ಖತರ್ನಾಕ್ ಪತ್ನಿ
ಸುದ್ದಿದಿನ,ದಾವಣಗೆರೆ : ಗಂಡನನ್ನೇ ಪತ್ನಿ ಕಿಡ್ನಾಪ್ ಮಾಡಿಸಿರುವ ಘಟನೆ ಜಿಲ್ಲೆಯ ಲೋಕಿಕೆರೆ ಗ್ರಾಮದಲ್ಲಿ ನಡೆದಿದೆ.
ಪತ್ನಿ ಸಂಗೀತಾ, ತನ್ನ ಪತಿಯನ್ನ ಕಿಡ್ನಾಫ್ ಮಾಡಿಸಿದ್ದಾರೆ. ಶ್ರೀನಿವಾಸ್ ಎಂಬಾತ ಕಿಡ್ನಾಫ್ ಗೆ ಒಳಗಾದ ಪತಿ.ಇವರಿಬ್ಬರು ಕಳೆದ ಎರಡು ವರ್ಷದಿಂದ ಪತಿ ಪತ್ನಿ ದೂರ ಇದ್ದರು. ಪತ್ನಿಯ ನಡುವಳಿಕೆ ಸರಿ ಇಲ್ಲದ ಹಿನ್ನೆಲೆಯಲ್ಲಿ ಪತ್ನಿಯನ್ನ ತೊರೆದಿದ್ದರು ಪತಿ ಶ್ರೀನಿವಾಸ್.
ಆದರೆ ಕಳೆದ ಎರಡು ದಿನದ ಹಿಂದೆ ಪತ್ನಿ ಸಂಗೀತಾ ಹಾಗೂ 6 ಜನ ಸಹಚರರು ಸೇರಿ ಪೆಟ್ರೋಲ್ ಬಂಕ್ ಕೆಲಸ ಮುಗಿಸಿ ಮನೆಗೆ ತೆರಳುತಿದ್ದ ಶ್ರೀನಿವಾಸ್ ರನ್ನು ಪ್ಯಾಸೆಂಜರ್ ಅಫೆ ಗಾಡಿಯಲ್ಲಿ ಕಿಡ್ನಾಫ್ ಮಾಡಿದ್ದರು.
ಪ್ರಕರಣ ಬೇಧಿಸಿದ ಹದಡಿ ಪೊಲೀಸರು ಪತ್ನಿ ಸಂಗೀತಾ ಹಾಗೂ ಇಬ್ಬರ ಬಂಧಿಸಿದ್ದು,ನಾಲ್ವರು ಪರಾರಿಯಾಗಿದ್ದಾರೆ. ಅವರನ್ನು ಸೆರೆಹಿಡಿಯಲು ಪೋಲೀಸರು ಬಲೆ ಬೀಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್| 9980346243