ಸಿನಿ ಸುದ್ದಿ
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!
ನಟಿ ಕೃತಿಕ ರವೀಂದ್ರ ಬಿಗ್ ಬಾಸ್ ರಿಯಾಲಿಟಿ ಶೋನ ಕಂಟೆಸ್ಟ್ಟೆಂಟ್ ಕೂಡ. ಇವರು ಇತ್ತೀಚಿಗೆ ಸಿನೆಮಾವೊಂದರಲ್ಲಿ ನಟಿಸಲು ಸಂಭಾವನೆ ವಿಷಯವಾಗಿ ನಡೆದ ಘಟನೆಯೊಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೀಗಿದೆ ಆ ಬರಹ.
ಇದೇನ ಸಭ್ಯತೆ, ಇದೇನ ಸಂಸ್ಕೃತಿ !
ಇತ್ತೀಚೆಗೆ ಒಂದು ಕರೆ ಬಂದಿತ್ತು. ಒಂದು ಸಿನೆಮಾ ಮಾತುಕತೆ. ಅದ್ಭುತ ಕಥೆ ಅಲ್ಲದಿದ್ದರೂ ಮಾಡಲಸಾಧ್ಯ ಅನ್ನಿಸುವಂಥದ್ದಲ್ಲ. ನಾನು ಗಮನಿಸಿರುವ ಹಾಗೆ,ಸಂಭಾವನೆ ಕಥೆಗಿಂತ ಮುಖ್ಯ ಎಂಬುವುದು ವಿಷಾದಕರ ಸಂಗತಿ. ಇಲ್ಲಿಯೂ ಸಂಭಾವನೆಯ ವಿಷಯ ಬಂದಾಗ ನಾನು ಸುತ್ತಿ ಬಳಸಿ ಮಾತನಾಡದೇ ನೇರವಾಗಿ “ಇಷ್ಟು” ಕೊಟ್ಟರೆ ಸಂತೋಷ. ಆಗಲಿಲ್ಲ ಅಂದ್ರೆ ನಿಮ್ಮ “budjet” ಹೇಳಿ. ಇಬ್ಬರಿಗೂ ಹೊಂದಿಕೆಯಾದಲ್ಲಿ ಮುಂದುವರಿಯೋಣ ಅಂದೆ. 2 ದಿನ ಬಿಟ್ಟು ಕರೆ ಬಂತು. ಅವರು ಹೇಳಿದ ಸಂಭಾವನೆ ನನಗೆ ಹೊಂದಿಕೆಯಾಗದಿದ್ದರಿಂದ “ಕ್ಷಮಿಸಿ, ಇಷ್ಟು ಸಂಭಾವನೆಗೆ ಕೆಲಸ ಮಾಡೋದಕ್ಕೆ ನಂಗೆ ಕಷ್ಟ ಆಗತ್ತೆ” ಅಂದೆ.
ವಿಷಯ ಇದಲ್ಲ. ನನ್ನ ನೇರನುಡಿಯಿಂದ ಮುಖಭಂಗಗೊಂಡ ಆಸಾಮಿ ಮಾತನ್ನ ಅಷ್ಟಕ್ಕೇ ನಿಲ್ಲಿಸದೇ “ ನಾನು ನನ್ನ ಸಿನೆಮಾಗಳಿಗೆ ಬಾಂಬೆಯಿಂದಲೇ ಹೀರೋಯಿನ್ ಗಳನ್ನ ಕರೆಸೋದು. ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ. ಕನ್ನಡದವರನ್ನ ನನ್ನ ಸಿನೆಮಾಗಳಿಗೆ ತಗೊಳಲ್ಲ” ಅಂದ.
ನಾನು “ ಒಹ್ ತಾವು ಕನ್ನಡದವರನ್ನೇ ತಗೋಳಲ್ವ? ಹೆಂಗೆ ಸರ್. ಕನ್ನಡದವರಾಗಿ ಕನ್ನಡದವರಿಗೆ ಅವಕಾಶಗಳನ್ನ ಕೊಡಲ್ವಾ?” ಅಂದೆ.
ಆಸಾಮಿ ” ಅಯ್ಯೋ ಹಾಗಲ್ಲ ಮೇಡಂ. ಅಷ್ಟು ಕಡಿಮೆಗೆ ಅಲ್ಲಿಂದ ಬಂದು ಕೆಲಸ ಮಾಡಿ ಹೋಗ್ತಾರೆ ” ಅಂದ.
So basically, ಬಾಂಬೆ ಇಂದ ಹೀರೋಯಿನ್ಗಳನ್ನ ಕರೆಸೋದು, ಇಲ್ಲಿಯವರನ್ನ ಗಣನೆಗೆ ತಗೊಳ್ದೆ ಇರೋದು ಇದೇಲ್ಲಕ್ಕೂ ಸಂಭಾವನೆ ಕಾರಣ. ನಾನು ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡಿದೀನಿ ಗೆಳೆಯರೇ. ಸಂಭಾವನೆನೇ ತಗೊಳ್ದೆ ಕೂಡ ಮಾಡಿದೀನಿ. ಇನ್ನು ವಿಪರ್ಯಾಸ ಅಂದ್ರೆ ಸಂಭಾವನೆ ಸಿಗದೇ ಮೋಸ ಕೂಡ ಹೋಗಿದೀನಿ. ಇವೆಲ್ಲಾ ನಂಗೆ ಒಳ್ಳೆ ಅನುಭವಗಳನ್ನ ಕೊಟ್ಟಿದೆ. (ಕೊಡ್ತಾ ಇದೆ)
ಆದ್ರೆ ಒಂದು ಬೇಡಿಕೆ. ಕಡಿಮೆ ಸಂಭಾವನೆಗೆ ಬರೋ ಕನ್ನಡದವರನ್ನೇ ಬೆಳೆಸಿ. ಅವಕಾಶಗಳನ್ನ ಕೊಡಿ. ಬಾಂಬೆ,ಅಲ್ಲಿ- ಇಲ್ಲಿ ಇರೋ ಹುಡುಗಿಯರನ್ನೇ ನೀವಾಳಿಸಿ ಬಿಸಾಕೋ ಅಂಥ ಅದ್ಭುತ ಪ್ರತಿಭೆಗಳು ನಮ್ಮ ಕನ್ನಡದಲ್ಲಿದ್ದಾರೆ. ಒಂದು ಚಿಕ್ಕ ಅವಕಾಶ ಬಹುಷಃ ಅವರ ಜೀವನವನ್ನೇ ಬದಲಾಯಿಸಬಹುದು. ಅನ್ಯಾಯ ಮಾಡಬೇಡಿ ಅಷ್ಟೇ. ನನಗೂ ಕೂಡ.
– ಕೃತ್ತಿಕಾ ರವೀಂದ್ರ
https://m.facebook.com/story.php?story_fbid=4255085074519185&id=100000532021557
ಸುದ್ದಿದಿನ.ಕಾಂ|ವಾಟ್ಸಾಪ್|9980346243