/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಕೆಎಸ್‍ಓಯು : ಅನುತ್ತೀರ್ಣ/ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2001-02 ರಿಂದ 2010-11 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಪದವಿಗಳಾದ ಬಿ.ಎ., ಬಿ.ಕಾಂ, ಪದವಿಗಳು, 2001-02 ರಿಂದ 2012-13 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಬಿ.ಲಿಬ್, ಬಿ.ಎಡ್ ಬಿ.ಎಡ್ (ವಿಶೇಷ), ಎಲ್ಲಾ ಡಿಪ್ಲೊಮೋ ಸರ್ಟಿಫಿಕೇಟ್ ಕಾರ್ಯಕ್ರಮ ಮತ್ತು 2001-02 ರಿಂದ 2013ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದ ಸ್ನಾತಕೋತ್ತರ (ವಾರ್ಷಿಕ-ಸೆಮಿಸ್ಟರ್) ಪದವಿಗಳಾದ ಎಂ.ಎ/ಎಂ.ಕಾಂ/ಎಂ.ಬಿ.ಎ/ಎಂ.ಎಡ್. ಎಂ ಲಿಬ್ ಐಎಸ್ಸಿ ಎಲ್ಲಾ ಎಂ.ಎಸ್ಸಿ ಮತ್ತು ಸ್ನಾತಕೋತ್ತರ ಡಿಪ್ಲೊಮೋ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಅನುತ್ತೀರ್ಣರಾಗಿರುವ/ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವವಿದ್ಯಾಲಯವು ಪ್ರತೀ ಕೋರ್ಸ್‍ಗೆ ನಿರ್ದಿಷ್ಟ ಶುಲ್ಕ ನಿಗದಿ ಪಡಿಸಿದ್ದು, ವಿದ್ಯಾರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಚಲನ್ ಮೂಲಕ ಶುಲ್ಕ ಪಾವತಿಸಬೇಕು. ನಂತರ ಪರೀಕ್ಷಾ ಅರ್ಜಿಯಲ್ಲಿ ನೊಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು, ಶುಲ್ಕ ಪಾವತಿಸಿರುವ ಚಲನ್‍ನ ಮೂಲ ಪ್ರತಿಯನ್ನು ಲಗತ್ತಿಸಿದ ಅರ್ಜಿಗಳನ್ನು 2020ರ ಜನವರಿ 04ರೊಳಗೆ ಕುಲಸಚಿವರು (ಪರೀಕ್ಷಾಂಗ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು 570006 ಗೆ ಅಂಚೆ ಅಥವಾ ಕೋರಿಯರ್ ಮೂಲಕ ಕಳುಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version