ದಿನದ ಸುದ್ದಿ
ಆದಾಯ ಹೆಚ್ಚಿಸಲು ಕೆ.ಎಸ್.ಆರ್.ಟಿ.ಸಿ ಬಸ್ ‘ಗೂಡ್ಸ್ ಸಾರಿಗೆ’ಯಾಗಿ ಬಳಕೆ
ಸುದ್ದಿದಿನ.ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಕೋವಿಡ್ ನಿಂದ ಬಸ್ ಸಂಚಾರ ಕಡಿಮೆ ಇರುವುದರಿಂದ ಕೆಎಸ್ ಅರ್ಟಿಸಿ ನೂರಾರು ಕೋಟಿ ನಷ್ಟ ದಲ್ಲಿದೆ.ಹಾಗಾಗಿ ಬಸ್ ಗಳನ್ನ ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಹೆಚ್ಚು ಆದಾಯ ಪಡೆಯಲು ನಿರ್ಧಾರ ಕೈಗೊಳ್ಳಲಾಯಿತು.
ಗುರುವಾರ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಗೆ ಬಸ್ ಗಳನ್ನು ಗುತ್ತಿಗೆ ಆದಾರದ ಮೇಲೆ ನೀಡಲು ತೀರ್ಮಾನ ಮಾಡಲಾಯಿತು.ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243