ರಾಜಕೀಯ
ಕುಂದಗೋಳ ಉಪಚುನಾವಣೆ : 42 ಲಕ್ಷ ರೂ.ನಗದು ವಶ
ಸುದ್ದಿದಿನ,ಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಅಗಡಿ ಗ್ರಾಮದ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ ನಲ್ಲಿ ನಿನ್ನೆ ಮೇ.6 ರ ಸಂಜೆ 42 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. 12 ಲಕ್ಷ ರೂಪಾಯಿಗಳಿಗೆ ಎಕ್ಸಿಸ್ ಬ್ಯಾಂಕಿನ ದಾಖಲೆಗಳನ್ನು ಒದಗಿಸಿದ್ದಾರೆ.
ಉಳಿದ 30 ಲಕ್ಷ ರೂ.ಗಳಿಗೂ ಇಂದು ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿರುವುದರಿಂದ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದೆ. ದಾಖಲೆಗಳನ್ನು ಒದಗಿಸಿದ ನಂತರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಹಣಬಿಡುಗಡೆ ಸಮಿತಿ ಈ ಕುರಿತು ಪರಿಶೀಲಿಸಿ,ನಿರ್ಣಯ ಕೈಗೊಳ್ಳಲಿದೆ ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243