/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಕುಂದಗೋಳ ಉಪಚುನಾವಣೆ ; 23 ಅಭ್ಯರ್ಥಿಗಳಿಂದ 34 ನಾಮಪತ್ರಗಳು

Published

on

ಸುದ್ದಿದಿನ,ಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಇಂದು ಸೋಮವಾರ ಮುಕ್ತಾಯವಾಯಿತು. ಇದುವರೆಗೆ 23 ಅಭ್ಯರ್ಥಿಗಳಿಂದ 34 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರ ವಿವರ

ವಿಶ್ವನಾಥ ವೀರಪ್ಪ ಕೂಬಿಹಾಳ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಪಕ್ಷೇತರರಾಗಿ ಎರಡು ನಾಮಪತ್ರಗಳು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಿದ್ಧನಗೌಡ ಈಶ್ವರಗೌಡ ಚಿಕ್ಕನಗೌಡ್ರ ಮೂರು ಪ್ರತಿಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ ಎರಡುಪ್ರತಿಗಳಲ್ಲಿ, ಭಾರತೀಯ ಜನತಾ ಪಕ್ಷ ಮತ್ತು ಪಕ್ಷೇತರರಾಗಿ ಮಲ್ಲಿಕಾರ್ಜುನ ವಿರೂಪಾಕ್ಷಪ್ಪ ಕಿತ್ತೂರ ಎರಡು ನಾಮಪತ್ರಗಳನ್ನು ಹಾಗೂ ಶಿವಾನಂದ ದ್ಯಾವಪ್ಪ ಬೆಂತೂರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಪಕ್ಷೇತರರಾಗಿ ಎರಡು ನಾಮಪತ್ರಗಳನ್ನು ಸಲ್ಲಿಸಿದರು.

ಪಕ್ಷೇತರರಾಗಿ ವೆಂಕನಗೌಡ ಬೆನಕನಗೌಡ ಪಾಟೀಲ, ಘೋರ್ಪಡೆ ಗುರುನಾಥ ದೇವಪ್ಪ, ಸುರೇಶ ವಿರೂಪಾಕ್ಷಪ್ಪ ಸವಣೂರ, ಈರಯ್ಯ ಶಿವಲಿಂಗಯ್ಯ ಹಿರೇಮಠ, ಹಜರತ್‌ಸಾಹೇಬ್ ನದಾಫ್,ಈಶ್ವರಪ್ಪ ಶೆಟ್ಟೆಪ್ಪ ಭಂಡಿವಾಡ ,ಶೈಲಾ ಸುರೇಶ ಗೋಣಿ, ರಾಜು ಅನಂತಸಾ ನಾಯಕವಾಡಿ, ದಯಾನಂದ ಗುರುಪುತ್ರಯ್ಯ ಚಿಕ್ಕಮಠ, ಶರಣಪ್ಪ ನಿಂಗಪ್ಪ ಕುರಿಯವರ್, ಗುರುಪುತ್ರ ಕೆಂಪಣ್ಣ ಹುಲ್ಲೂರ, ಕುತುಬುದ್ದೀನ್ ಇಮಾಮಸಾಬ್ ಬೆಳಗಲಿ, ತುಳಸಪ್ಪ ಕರಿಯಪ್ಪ ದಾಸರ್, ಸಿದ್ದಪ್ಪ ಸತ್ಯಪ್ಪ ಗೋಧಿ,ಸೋಮಣ್ಣ ಚನ್ನಬಸಪ್ಪ ಮೇಟಿ ಅವರು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿ ವಿ.ಪ್ರಸನ್ನ ಅವರಿಗೆ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ,ತಹಸೀಲ್ದಾರ ಶಿವಾನಂದ ಸಾಗರ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version