ದಿನದ ಸುದ್ದಿ
ಕುಂಭ ಮೇಳದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ : ಬೆಳಗಾವಿ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ
ಸುದ್ದಿದಿನ,ಬೆಳಗಾವಿ : ಪಂತ ಬಾಳೇಕುಂದ್ರಿ (ಬಿಕೆ) ಗ್ರಾಮದಲ್ಲಿ ಶ್ರೀ ಪಂತ ಮಹಾರಾಜರ ಆಶೀರ್ವಾದವನ್ನು ಪಡೆದು ಶ್ರೀ ಉಮಾಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಏರ್ಪಡಿಸಿದ ಕುಂಭ ಮೇಳದಲ್ಲಿ ಬುಧವಾರ ಪಾಲ್ಗೊಳ್ಳಲಾಯಿತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸದ್ಯದಲ್ಲೆ ಬರುತ್ತಿರುವ ಬೆಳಗಾವಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಅಧಿಕೃತ ಅಭ್ಯರ್ಥಿಯಾದ ಶ್ರೀ ವ್ಹಿ ಎಸ್ ಸಾಧುನವರ ಪರವಾಗಿ ಜನಗಳ ಜೊತೆಗೆ ಚರ್ಚಿಸಿ ಒಟ್ಟಾರೆ ಬೆಳಗಾವಿಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಾಧುನವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ನೀಡಿ ಪ್ರಚಂಡ ಬಹುಮತಗಳಿಂದ ಸಾಧುನವರನ್ನು ಗೆಲ್ಲಿಸಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಗ್ರಾಮದ ಜನತೆ, ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401