ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಬಂದ್ರು ಮಾಲಿಂಗ..!

Published

on

ಸುದ್ದಿದಿನ ಡೆಸ್ಕ್ : ಐಪಿಎಲ್ 13ನೇ ಆವೃತ್ತಿಯಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ ಹೊರನಡೆದಿದ್ದಾರೆ. ಹೌದು, ವೈಯಕ್ತಿಕ ಕಾರಣಗಳಿಂದ ಮಾಲಿಂಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರು ಮಾಲಿಂಗ ಅವರ ಸ್ಥಾನವನ್ನು ತುಂಬಲಿದ್ದು, ವಾರಾಂತ್ಯದಲ್ಲಿ ತಂಡವನ್ನು ಅಬುಧಾಬಿಯಲ್ಲಿ ಕೂಡಿಕೊಳ್ಳಲಿದ್ದಾರೆ. 30 ವರ್ಷದ ಪ್ಯಾಟಿನ್ಸನ್ ಆಸೀಸ್ ಪರ 21 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version