ದಿನದ ಸುದ್ದಿ

‘ನಿಂಬೆಹಣ್ಣಿನ ತಿಳಿಸಾರು’ ಮಾಡೋದು ಹೀಗೆ ನೋಡಿ..!

Published

on

ಇಡ್ಲಿ, ದೋಸೆ, ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್ ಆಗಿರುವ ನಿಂಬೆ ಹಣ್ಣಿನ ತಿಳಿಸಾರು ಮಾಡುವುದು ಹೇಗೆ ತಿಳಿಯೋಣ ಬನ್ನಿ.

ಬೇಕಾಗುವ ಸಾಮಗ್ರಿಗಳು

  1. ನಿಂಬೆಹಣ್ಣು – 1
  2. ತೊಗರಿಬೇಳೆ – ಸಣ್ಣ ಕಪ್ಪು ಬಳಸಿ
  3. ಟೊಮೇಟೊ 1(ಸಣ್ಣ ಗಾತ್ರದ )
  4. ಹಸಿಮೆಣಸಿನಕಾಯಿ – 2
  5. ಮೆಣಸು – 10
  6. ಜೀರಿಗೆ – ಅರ್ಧ ಚಮಚ
  7. ಎಣ್ಣೆ – 2 ಚಮಚ
  8. ಹಿಂಗು
  9. ಕೊತ್ತಂಬರಿ ಸೊಪ್ಪು
  10. ಸಾಸಿವೆ
  11. ಉಪ್ಪು

ಮಾಡುವ ವಿಧಾನ

ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ 3-4 ವಿಶಲ್ ಕೂಗಿಸಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಒಂದು ದಪ್ಪಗೆ ಹೆಚ್ಚಿದ ಟೊಮೇಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿ. ನಂತರ ಅದಕ್ಕೆ ಬೆಂದ ತೊಗರಿಬೇಳೆ ಹಾಕಿ. ಮೆಣಸು ಹಾಗೂ ಜೀರಿಗೆಯನ್ನು ಡ್ರೈ ಆಗಿ ಹುರಿದು ಪುಡಿ ಮಾಡಿ ಹಾಕಿ. ರುಚಿಗೆ ಉಪ್ಪನ್ನು ಹಾಕಿ ಎಲ್ಲಾ ಬೆಂದ ನಂತರ ಸಾಸಿವೆ ಹಾಗೂ ಹಿಂಗಿನ ಒಗ್ಗರಣೆ ಸೇರಿಸಿ ಆಫ್ ಮಾಡಿ.ನಂತರ ನಿಂಬೆಹಣ್ಣನ ರಸ ಸೇರಿಸಿ. ಬಿಸಿ ಅನ್ನದೊಂದಿಗೆ ಸವಿಯಿರಿ.

ವಿಶೇಷ ಸೂಚನೆ : ನಿಂಬೆಹಣ್ಣು ಹಾಕಿದ ನಂತರ ಕುಡಿಸಬೇಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version