ಲೈಫ್ ಸ್ಟೈಲ್

‘ಕಲ್ಲಂಗಡಿ ಸಿಪ್ಪೆ ದೋಸೆ, ತೆಳ್ಳವು’ ಮಾಡಿ ಸವಿಯಿರಿ..!

Published

on

  • ಶಶಿಕಲಾ ಸುನೀಲ್

ಬೇಕಾಗುವ ಸಾಮಗ್ರಿಗಳು

  1. ದೋಸೆ ಅಕ್ಕಿ – 2 ಕಪ್
  2. ಮೆಂತ್ಯ – 1 ಸ್ಪೂನ್
  3. ತೆಂಗಿನತುರಿ – 1 ಹಿಡಿ
  4. ಕಲ್ಲಂಗಡಿಯ ಸಿಪ್ಪೆ 10 – 12(ಬಿಳಿ ಭಾಗದ ಹೋಳು )
  5. ಉಪ್ಪು ರುಚಿಗೆ

ಮಾಡುವ ವಿಧಾನ

ದೋಸೆ ಅಕ್ಕಿ ಹಾಗೂ ಮೆಂತ್ಯ ಚೆನ್ನಾಗಿ ತೊಳೆದು 6 -8 ಗಂಟೆ ನೆನಸಿ.ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಮೆಂತ್ಯ, ಒಂದು ಹಿಡಿ ತೆಂಗಿನಕಾಯಿತುರಿ, ಕಲ್ಲಂಗಡಿಸಿಪ್ಪೆ ಎಲ್ಲವನ್ನು ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ನೀರು ಸೇರಿಸಿ (ನೀರ್ ದೋಸೆ ಹದಕ್ಕೆ ) ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕಾದ ಹೆಂಚಿಗೆ ತೆಳ್ಳಗೆ ಹಾಕಿ (ನೀರ್ ದೋಸೆ ರೀತಿ).ಇಲ್ಲಿ ನಾನು ಪುದಿನಾ ಚಟ್ನಿ ಮಾಡಿದ್ದೇನೆ. ನೀವು ಯಾವ ಚಟ್ನಿ ಯೊಂದಿಗಾಗದರು ಸವಿಯಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version