ಲೈಫ್ ಸ್ಟೈಲ್
“ಲಿಪ್ ಆರ್ಟ್ ” , ಒಂದು ಅದ್ಭುತ ಕಲೆ..!
ಲಿಪ್ಸ್ಟಿಕ್! ಯಾರಿಗೆ ತಾನೇ ಇಷ್ಟವಿಲ್ಲ! ಪ್ರತಿ ಮಹಿಳೆಯರ ಪರ್ಸ್ ನಲ್ಲಿ ಪೆನ್ನು ಇರುತ್ತದೆಯೋ ಇಲ್ವೋ.. ಲಿಪ್ಸ್ಟಿಕ್ ಇದ್ದೇ ಇರುತ್ತದೆ. ಇವತ್ತಿನ ಫ್ಯಾಷನ್ ಪ್ರಪಂಚದಲ್ಲಿ ತುಟಿಗಳ ಲಿಪ್ಸ್ಟಿಕ್ ಒಂದು ಬಣ್ಣದ ಮಾಯಾ ಲೋಕವನ್ನು ಸೃಷ್ಟಿಸಿದೆ. ಲಿಪ್ಸ್ಟಿಕ್ ಮೋಹ ಯುವತಿಯರು ಆವರಿಸಿದೆ.
ಹಿಂದಿನ ಸಾಂಪ್ರದಾಯಿಕ ಕೆಂಪು, ಪಿಂಕ್, ಮರೂನ್ , ಷೇಡ್ ನ ಲಿಪ್ಸ್ಟಿಕ್ ಗಳನ್ನು ಪಕ್ಕಕ್ಕೆ ಇಟ್ಟು “ಬೋಲ್ಡ್ ಮತ್ತು ಬ್ಯೂಟಿಫುಲ್ ” ಎನಿಸುವ ನೀಲಿ, ಹಳದಿ, ಹಸಿರು, ಪರ್ಪಲ್ , ಬಿಳಿ, ಕಪ್ಪು, ಕೇಸರಿ, ಲಿಪ್ಸ್ಟಿಕ್ ಗಳು ಫ್ಯಾಷನ್ ಪ್ರಪಂಚಕ್ಕೆ ಲಗ್ಗೆ ಇಟ್ಟಿವೆ.
ಈ ಲಿಪ್ಸ್ಟಿಕ್ ಮೋಹ ಬರೀ ಬಣ್ಣಕ್ಕೆ ಸೀಮಿತವಾಗಿರದೆ, “ಲಿಪ್ ಆರ್ಟ್ ” ಎಂಬ ಅಧ್ಬುತ ಕಲೆ ಗೆ ನಾಂದಿ ಹಾಡಿದೆ. ಒಂದೇ ಬಣ್ಣದ ಲಿಪ್ಸ್ಟಿಕ್ ಹಚ್ಚಿ ಕೊಳ್ಳುವುದು ಸಾಮಾನ್ಯ. ಆದರೆ ಹಲವಾರು ಬಣ್ಣ ಗಳನ್ನು ಬಳಸಿ ತುಟಿಗಳ ಮೇಲೆ ಚಿತ್ರ ಬಿಡಿಸುವ ಒಂದು ಕಲೆ! ಹೌದು! ಫ್ಯಾಷನ್ ಬದಲಾದಂತೆ, ತನ್ನೊಂದಿಗೆ ನೂತನ ಕಲೆ ಯನ್ನು ಹೊತ್ತು ತರುತ್ತದೆ. ಅದರ ಒಂದು ತುಣುಕು ಈ ” “ಲಿಪ್ಸ್ಟಿಕ್ ಆರ್ಟ್ “.
ಲಿಪ್ಸ್ಟಿಕ್ ಆರ್ಟ್!
ಪುಟ್ಟ ತುಟಿಗಳ ಮೇಲೆ ವಿವಿಧ ಬಣ್ಣದ ಲಿಪ್ಸ್ಟಿಕ್ ಬಳಸಿ, ಪ್ರಾಣಿ, ಪಕ್ಷಿ, ಮನುಷ್ಯ, ಕಾರ್ಟೂನ್, ಗಿಡ-ಮರ, ಹೂ..ನಗರ, ಹೀಗೆ ವಿಭಿನ್ನ ಸನ್ನಿವೇಶ.. ವಸ್ತು ಗಳನ್ನು ನಾಜೂಕಾಗಿ ರಚಿಸುವ ಒಂದು ಅಧ್ಬುತ ಕಲೆ.
1. ಅನಿಮಲ್ ಇನ್ಸ್ಪೈರ್ಡ್ ಲಿಪ್ಸ್ಟಿಕ್ ಆರ್ಟ್
ಸೌಂದರ್ಯ ಅನ್ನೋದು ಪ್ರತಿ ಜೀವಿಯಲ್ಲೂ ಅಡಕವಾಗಿರುತ್ತದೆ. ಅದಕ್ಕೆ ಕನ್ನಡಿ ಹಿಡಿದಂತಿದೆ ಈ “ಅನಿಮಲ್ ಇನ್ಸ್ಪೈರ್ಡ್ ಲಿಪ್ ಆರ್ಟ್ “!
ಝಿಬ್ರಾ, ಚಿರತೆ, ಹುಲಿ, ನವಿಲು, ಮೀನು, ಚಿಟ್ಟೆ .. ಹೀಗೆ ಪ್ರಾಣಿ-ಪಕ್ಷಿಗಳನ್ನು ಹೋಲುವಂತಹ ವಿನ್ಯಾಸ ಗಳನ್ನು ಲಿಪ್ಸ್ಟಿಕ್ ಬಣ್ಣ ಗಳನ್ನು ಬಳಸಿ ತುಟಿಗಳ ಮೇಲೆ ಚಿತ್ರ ಬಿಡಿಸುವ ಒಂದು ಕಲೆ ಈ ಅದ್ಭುತವಾದ “ಲಿಪ್ಸ್ಟಿಕ್ ಆರ್ಟ್ “!
2. ಕಾರ್ಟೂನ್ ಲಿಪ್ಸ್ಟಿಕ್ ಆರ್ಟ್ !
ಕಾರ್ಟೂನ್ ಮಕ್ಕಳಿಗೆಮಾತ್ರ ಅಲ್ಲ, ಎಲ್ಲರಿಗೂ ಮುದ ಕೊಡುವ ಚಿತ್ರ.. ಇಂತಹ ಜನಪ್ರಿಯ ಕಾರ್ಟೂನ್ ಪಾತ್ರ ಗಳನ್ನು ತುಟಿಗಳ ಮೇಲೆ ಬಿಡಿಸುವ ಕಲೆ “ಕಾರ್ಟೂನ್ ಲಿಪ್ಸ್ಟಿಕ್ ಆರ್ಟ್ “.
3. ಫ್ಲೋರಲ್ ಲಿಪ್ಸ್ಟಿಕ್ ಆರ್ಟ್ !
ಬಣ್ಣ ಬಣ್ಣದ ಹೂ ಗಳನ್ನು ತುಟಿಗಳ ಮೇಲೆ ಕಲಾತ್ಮಕ ವಾಗಿ ಬಿಡಿಸಲಾಗುತ್ತದೆ. ಇತ್ತೀಚೆಗೆ 2017ರ ನ್ಯೂಯಾರ್ಕ್ ಫ್ಯಾಷನ್ ಷೋ ನಲ್ಲಿ ಈ “ಫ್ಲೋರಲ್ ಲಿಪ್ ಆರ್ಟ್ ” ಫ್ಯಾಷನ್ ಪ್ರಪಂಚದಲ್ಲಿ ಕ್ರಯಾಶೀಲತೆಯ ಒಂದು ದೊಡ್ಡ ಅಲೆಯನ್ನು ಎಬ್ಬಿಸಿದೆ.
4. ಮೆಸೇಜ್ ಲಿಪ್ಸ್ಟಿಕ್ ಆರ್ಟ್
ಲಿಪ್ ಆರ್ಟ್ ಕೇವಲ ಒಂದುಟ್ರೆಂಡ್ ಅಲ್ಲ. ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ದಲ್ಲಿ ಈ ಲಿಪ್ಸ್ಟಿಕ್ ಆರ್ಟ್ ದೊಡ್ಡ ಸದ್ದು ಮಾಡುತ್ತಿದೆ. ಹೌದು! ಪರಿಸರ ಸ್ನೇಹಿ ಚಿತ್ರ ಗಳನ್ನು ತುಟಿಗಳ ಮೇಲೆ ರಚಿಸಿ, ಅದರ ಮೂಲಕ ಜನರಿಗೆ ಒಂದು ಉತ್ತಮ ಸಂದೇಶ ನೀಡುವ ಪ್ರಯತ್ನ ದಲ್ಲಿ ಈ ಲಿಪ್ಸ್ಟಿಕ್ ಆರ್ಟ್ ಯಶಸ್ವಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ಕಲೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಲ್ಲಿದೆ.
ಲಿಪ್ ಆರ್ಟ್ ಮಾಡುವುದು ಹೇಗೆ?
ಈ ಕಲೆಯನ್ನುಮಾಡಲು ನೀವು ಪರಿಣಿತರಾಗಿರಬೇಕೆಂದೇನಿಲ್ಲ. ಸ್ವಲ್ಪ ಮಟ್ಟಿಗೆ ಕ್ರಿಯಾಶೀಲತೆ ಹಾಗೂ ಭ್ರಷ್ ಬಳಕೆ ತಿಳಿದಿದ್ದರೆ ಸಾಕು. ನೀವೂ ಸಹ ಮನೆಯಲ್ಲೇ ಈ ಕರೆಯನ್ನು ಪ್ರಯತ್ನಿಸಬಹುದು. ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬಣ್ಣದ ಲಿಪ್ಸ್ಟಿಕ್ ಬಳಸಿ ತುಟಿಗಳ ಮೇಲೆ ಚಿತ್ರ ಬಿಬಡಿಸುವ ಕಲೆಯನ್ನು ನೀವೂ ಒಮ್ಮೆ ಪ್ರಯತ್ನಿಸಿ. ದಿನ ನಿತ್ಯದ ಬಳಕೆಗೆ ಸೂಕ್ತವಲ್ಲ ದಿದ್ದರೂ, ಪಾರ್ಟಿ, ಫ್ಯಾಷನ್ ಪ್ರಪಂಚದಲ್ಲಿ, ಫೋಟೋಶೂಟ್ ಗಳಿಗೆ ಹೆಚ್ಚು ಸೂಕ್ತ ಎನಿಸುತ್ತದೆ. ಬಹಳ ವಿಭಿನ್ನ ವಾದ ಈ ಕಲೆ ಸದ್ಯ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಹಿಟ್ ಟ್ರೆಂಡ್ ಆಗಿದೆ.