ದಿನದ ಸುದ್ದಿ

ಲಾಕಪ್ ಡೆತ್ : ಪೊಲೀಸರನ್ನು ಬಂಧಿಸುವಂತೆ ದಲಿತಪರ ಸಂಘಟನೆಗಳ ಒಕ್ಕೂಟ ಒತ್ತಾಯ

Published

on

ಸುದ್ದಿದಿನ,ಹೊಸಕೋಟೆ: ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಾಪ್ ಡೆತ್ ಆಗಿದ್ದ ಮುನಿಕುಳ್ಳಪ್ಪ ಸಾವಿಗೆ ಕಾರಣರಾಗಿದ್ದ ಲಾಕಪ್ ಡೆತ್ ನ ಆರೋಪಿತ ಪೊಲೀಸರನ್ನು ಬಂದಿಸುವಂತೆ ದಲಿತಪರ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷ ವೆಂಕಟಸ್ವಾಮಿ ಒತ್ತಾಯಿಸಿದ್ದಾರೆ.

ಹೊಸಕೋಟೆ ಪಟ್ಟಣದಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದ ನಿವಾಸಿ ಮುನಿಕುಳ್ಳಪ್ಪ ನನ್ನು ಮದ್ಯ ಕದ್ದ ಅರೋಪದಲ್ಲಿ‌ ದೂರು ಬಾರದಿದ್ದರು ಬಂದಿಸಿ ಶಾರೀರಿಕವಾಗಿ ಕಿರುಕುಳ ನೀಡಿ ಸಾವಿಗೆ ಕಾರಣರಾದ ತಿರುಮಲಶೆಟ್ಟಿ ಹಳ್ಳಿ ಪೊಲೀಸರು, ಪ್ರಕರಣದ ನಂತರ ತಲೆಮರೆಸಿಕೊಂಡಿರುವ ಇನ್ಸ್ಪೆಕ್ಟರ್ ರಘು, ಸಬ್ ಇನ್ಸ್ಪೆಕ್ಟರ್ ರಾಕೇಶ್ ಸೇರಿ ಒಟ್ಟು ಆರು ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.

ಅರೋಪಿಗಳಾದ ಪೊಲೀಸರನ್ನು ಬಂದಿಸಿ ವಜಾಗೊಳಿಸದೆ ಹೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಬೃಹತ್ ಪ್ರತಿಭಟನೆ ಎಚ್ಚರಿಕೆ ನೀಡಿದ ದಲಿತ ಮುಖಂಡರು. ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ, ಕುಟುಂಬದವರಿಗೆ ಸರ್ಕಾರಿ ನೌಕರಿ, ಅರೋಪಿಗಳಿಗೆ ಕಠಿಣ ಶಿಕ್ಷೆ ಬೇಡಿಕೆಗಳನ್ನಿಟ್ಟಿದ್ದಾರೆ.

ತನ್ನ ಗಂಡನ ಸಾವಿಗೆ ಕಾರಣರಾದ ಪೊಲೀಸರನ್ನು ಬಂದಿಸದೆ ಹೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುನಿಕುಳ್ಳಪ್ಪನ ಪತ್ನಿ ಧನಲಕ್ಷ್ಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version