ರಾಜಕೀಯ
ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾವಾಗ
ಸುದ್ದಿದಿನ,ಬೆಂಗಳೂರು: ಮುಂಬರುವ 17ನೇ ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇಂದು ವೇಳಾಪಟ್ಟಿ ಘೋಷಣೆಯಾಗಿದೆ.
ಥರ್ಡ್ ಫೇಸ್ನಲ್ಲಿ ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ – ಒಟ್ಟಾರೆಯಾಗಿ, ಏಪ್ರಿಲ್ 18 (ಗುರುವಾರ) ಮತ್ತು 23 (ಮಂಗಳವಾರ) ಚುನಾವಣಾ ದಿನಾಂಕಗಳು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 5 ಕೋಟಿ 3 ಲಕ್ಷ 46 ಸಾವಿರ ಮತದಾರರಿದ್ದಾರೆ.
ಏಪ್ರಿಲ್ 18 (ಗುರುವಾರ) ಈ 14 ಕ್ಷೇತ್ರಗಳಲ್ಲಿ ಚುನಾವಣೆ
- ಚಾಮರಾಜನಗರ
- ಮೈಸೂರು
- ಮಂಡ್ಯ,
- ಬೆಂಗಳೂರು ಉತ್ತರ
- ಬೆಂಗಳೂರು ದಕ್ಷಿಣ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಕೇಂದ್ರ
- ತುಮಕೂರು
- ಹಾಸನ
- ದಕ್ಷಿಣ ಕನ್ನಡ,
- ಚಿಕ್ಕಬಳ್ಳಾಪುರ
- ಉಡುಪಿ-ಚಿಕ್ಕಮಗಳೂರು
- ಕೋಲಾರ
- ಚಿತ್ರದುರ್ಗ
ಏಪ್ರಿಲ್ 23 (ಮಂಗಳವಾರ) ಈ 14 ಕ್ಷೇತ್ರಗಳಲ್ಲಿ ಚುನಾವಣೆ
- ಚಿಕ್ಕೋಡಿ-ಸದಲಗಾ
- ಬೆಳಗಾವಿ
- ಬಾಗಲಕೋಟೆ
- ಗುಲ್ಬರ್ಗಾ
- ರಾಯಚೂರು
- ಬೀದರ್
- ಕೊಪ್ಪಳ
- ಬಿಜಾಪುರ
- ಬಳ್ಳಾರಿ
- ಹಾವೇರಿ
- ಧಾರವಾಡ
- ಉತ್ತರ ಕನ್ನಡ
- ದಾವಣಗೆರೆ
- ಶಿವಮೊಗ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9986715401