ದಿನದ ಸುದ್ದಿ
ಕೊನೆಗೂ ಫಲಿಸಿತು ಉತ್ತರ ಕರ್ನಾಟಕದ ಹೋರಾಟ
ಮಹಾದಾಯಿ ನೀರಿಗಾಗಿ ಹಲವು ವರ್ಷಗಳಿಂದ ಸತತವಾಗಿ ಹೋರಾಟ ನಡೆದಿದೆ. ಸುದೀರ್ಘ ಹೋರಾಟಕ್ಕೆ ಇದೀಗ ದೀಪಾವಳಿಯ ಬಂಪರ ಆಪರ್ ಎಂಬತೆ ಕೇಂದ್ರ ಸರ್ಕಾರಯು ಕುಡಿಯುವ ನೀರಿಗಾಗಿ ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನ ಮಲಪ್ರಭಾ ನದಿಗೆ ತಿರಿಗಿಸುವ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದೆ. ಈ ಯೋಜನೆಯ ಆದೇಶವನ್ನು ಕೇಂದ್ರ ಪರಿಸರ ಸಚಿವಾಲಯ ಹೋರಡಿಸಿದ್ದು, ಉತ್ತರ ಕರ್ನಾಟಕ ಭಾಗದ ಜನರ ಮುಖದಲ್ಲಿ ಸಂತಸವನ್ನು ಮೂಡಿಸಿದೆ.
ಪಶ್ಚಿಮ ವಾಹಿನಿಯ ನೀರನ್ನು ಪೂರ್ವಕ್ಕೆ ತಿರಿಗಿಸುವ ಯೋಜನೆ ರಾಜ್ಯದಲ್ಲಿಯೇ ಮೊಟ್ಟಮೊದಲದ್ದಾಗಿದೆ. ಈ ಯೋಜನೆಗೆ ಇದ್ದ ಪ್ರಮುಖ ಅಡೆತಡೆಗಳು ನಿವಾರಣೆಯಾದಂತಾಗಿವೆ. ಅರ್ಧಕ್ಕೆ ಸ್ಥಗಿತಗೊಂಡಿರುವ ನಾಲಾ ತಿರುವು ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದಿರುವುದು ಸಮಸ್ಯೆಯಾಗುತ್ತಿತ್ತು. ಇದೀಗ ಷರತ್ತುಬದ್ಧವಾಗಿ ಅಅನುಮತಿ ದೊರೆತಿರುವುದುದರಿಂದ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ಅನುಕುಲವಾಗಲಿದೆ.
ಕಳಸಾ ಬಂಡುರಿ ಯೋಜನೆಯಿಂದ ರೈತರಿಗೆ ತಲುಪ ಬೇಕಾದ ನೀರು ಸಲೀಸಾಗಿ ಸಿಗಲಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕುಂದಗೋಳ ಹಾಗೂ 40 ಹಳ್ಳಿಗಳ ಕುಡಿಯುವ ನೀರಿಗಾಗಿ ರಾಜ್ಯದಲ್ಲೇ ಕಳಸಾ, ಬಂಡೂರಿ ಮತ್ತಿತರ ಹಳ್ಳಿಗಳ ನೀರನ್ನು ತಿರುಗಿಸಿ ಮಹದಾಯಿ ನದಿಪಾತ್ರಕ್ಕೆ ಸೇರಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಾಲ್ಕು ಜಿಲ್ಲೆಗಳು ಫಲಾನುಭವಿ ಪ್ರದೇಶ ಹೊಂದಿದ್ದು, 499.13 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಆಗಲಿದೆ. ಕುಡಿಯುವ ನೀರಿಗಾಗಿ 3.90 ಟಿಎಂಸಿ ನೀರು ಅಗತ್ಯವಿದೆ. ಇನ್ನು ಕೆಲ ತಾಂತ್ರಿಕ ತೊಡಕುಗಳು ಇದ್ದು, ನ್ಯಾಯಮಂಡಳಿಯ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ.
ಅಲ್ಲದೆ, ಈ ಯೋಜನೆಗೆ ಗೋವಾ ತಕರಾರು ತೆಗೆದಿದ್ದು, ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳುವುದು ತುರ್ತು ಅಗತ್ಯ. ಭೀಮಗಡ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಯೋಜನೆ ನಡೆಯಬೇಕಿರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯ. ಆದರೆ, ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಅನುಮತಿ ಪಡೆಯುವುದು ಕಷ್ಟವೇನಲ್ಲ.
ಈಗಾಗಲೇ ಈ ಯೋಜನೆಗಾಗಿ ರೈತರು ಹಲವು ದಶಕಗಳ ಕಾಲ ಕಾಯ್ದಿದ್ದಾರೆ. ಪ್ರಭುತ್ವ ನಿರ್ಲಕ್ಷ÷್ಯ ವಹಿಸಿದಾಗ ಉಗ್ರ ಹಾಗೂ ದೀರ್ಘ ಹೋರಾಟ ಮಾಡಿ ಎಚ್ಚರಿಸಿದ್ದಾರೆ. ಹಾಗಾಗಿ, ಇನ್ಮುಂದೆಯಾದರೂ ಕಾಮಗಾರಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕಿದೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಇಲ್ಲಿನ ನೀರನ್ನು ವಿದ್ಯುತ್ ಉತ್ಪಾದನೆಗೋ, ಮತ್ತಾವುದೋ ಉದ್ದೇಶಕ್ಕೆ ಕೇಳುತ್ತಿಲ್ಲ. ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ ಯೋಜನೆಗಳಿಗೆ ಅನುಮತಿ ನೀಡಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು. ಪ್ರಸಕ್ತ, ಮೊದಲ ಹಂತದ ಜಯ ಸಿಕ್ಕಿರುವುದಂತೂ ನಿಜ. ಈಗ ಉಳಿದ ಕಾಮಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಂಡು, ಉತ್ತರ ಕರ್ನಾಟಕ ಜನರ ಬವಣೆ ನಿವಾರಣೆ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಕಾಂಚನಾ ಬಸವರಾಜ ಪೂಜಾರಿ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಮಹಿಳಾ ವಿವಿ
ವಿಜಾಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243