ದಿನದ ಸುದ್ದಿ
ಸುಮಲತಾ ಚುನಾವಣಾ ಖರ್ಚಿಗೆ ದೇಣಿಗೆ ನೀಡಿದ ಕಾಂಗ್ರೆಸ್ಸಿಗ
ಸುದ್ದಿದಿನ,ಮಂಡ್ಯ : ಸುಮಲತಾ ಅಂಬರೀಶ್ ಚುನಾವಣಾ ಪ್ರಚಾರ ಭರ್ಜರಿಯಾಗಿದೆ. ಅಂಬರೀಶ್ ಅಭಿಮಾನಿಗಳು ಸುಮಲತ ಪ್ರಚಾರಕ್ಕೆ ಹೋದಲೆಲ್ಲ ಅವರಿಗೆ ಸಾಥ್ ನೀಡುತ್ತಿದ್ದಾರೆ. ಯಶ್ ಮತ್ತು ದರ್ಶನ್ ಕೂಡ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವರಾಮೇ ಗೌಡ ಅವರು ಮಂಡ್ಯವನ್ನ ನಾಯ್ಡುಗಳು ಆಡಳಿತ ನಡೆಸೋಕೆ ಬಿಡೋದಿಲ್ಲ, ಇಲ್ಲಿ ಏನಿದ್ದರೂ ಗೌಡರದೇ ಆಡಳಿತ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಅಂದಹಾಗೆ ಸುಮಲತಾ ಮದ್ದೂರಿನ ಶಿವಪುರದ ಪ್ರಮುಖ ಬೀದಿಗಳಲ್ಲಿ ಬುಧವಾರ ಪ್ರಚಾರ ನಡೆಸಿದರು. ಗ್ರಾಮಸ್ಥರು ಹೂ ಎರಚಿ ಸುಮಲತಾಗೆ ಸ್ವಾಗತ ನೀಡಿದ್ದಾರೆ. ಈ ವೇಳೆ ಪುರಸಭಾ ಸದಸ್ಯ ರಾಮು ಹಾಗು ಕಾಂಗ್ರೆಸ್ ಪುರಸಭಾ ಸದಸ್ಯ ನಂದೀಶ್ ಚುನಾವಣಾ ಖರ್ಚಿಗೆಂದು ಸುಮಲತಾ ಅವರ ಮಡಿಲಿಗೆ ಎಲೆ ಅಡಿಕೆ ಜೊತೆ 5,000 ರೂ. ದಾನ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401