ದಿನದ ಸುದ್ದಿ

ಕರೋನ ಎರಡನೇ ಅಲೆಯ ನಡುವೆಯೂ, ನೀರಿನ ಮಹತ್ವ ಸಾರಲು #SoloCleanUpDrive ಹಮ್ಮಿಕೊಂಡ ಹತ್ತು ವರ್ಷದ ಕನ್ನಡದ ಕಿರಿಯ ಲೇಖಕಿ

Published

on

ಸುದ್ದಿದಿನ ಡೆಸ್ಕ್ : ವಿಶ್ವ ನೀರಿನ ದಿನಾಚರಣೆ ಅಂಗವಾಗಿ ಬೆಂಗಳೂರಿನ ವಿಬ್ಗಯಾರ್ ಶಾಲೆಯ ಐದನೇ ತರಗತಿಯ ಬಾಲಕಿ ಮಾನ್ಯ,  ನೀರಿನ ಮಹತ್ವ ಸಾರಲು ಯಡಯೂರಿನ ಮಾರ್ಕೋನಹಳ್ಳಿ ಜಲಾಶಯದ ಹಿಂಬದಿಯ ಕೆರೆ ( backwaters bed) ಯಲ್ಲಿ , ಸ್ವಯಂ ಪ್ರೇರಿತರಾಗಿ ಕಸ ತೆಗೆದು ಜಾಗವನ್ನು ಸ್ವಚ್ಛ ಗೊಳಿಸುವುದರೊಂದಿಗೆ , ನೀರಿನ ದಿನದ ಮಹತ್ವ ಸಾರಿದಳು.

ಮಾನ್ಯ ತನ್ನ ಎಂಟನೇ ವಯಸ್ಸಿಗೇ ಪ್ರಕೃತಿ ಯ ಬಗ್ಗೆ ಅಪಾರ ಕಾಳಜಿ ಬೆಳಸಿಕೊಂಡಿದ್ದು, ಮಾರ್ಚಿ  22 2018 , ರಲ್ಲಿ ಚಿನ್ನರ ವಾಕಥಾನ್ ಆಯೋಜಿಸುವುದರೊಂದಿಗೆ, 36 ಮಕ್ಕಳು ಮತ್ತು  54 ಪೋಷಕರು ಭಾಗವಹಿಸಿದ ವಾಕಥಾನ್ನಲ್ಲಿ ಯಶಸ್ವಿಯಾಗಿ  ಭಾಗವಹಿಸಿದ್ದರು.

2019ರಲ್ಲಿ ಕನ್ನಡದಲ್ಲಿ  ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕನ್ನಡದಲ್ಲಿ ರಾಪ್ ಹಾಡು ರಚಿಸಿದ್ದು,  ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 2020 ರಲ್ಲಿ,  “ನೀರಿನ ಪುಟಾಣಿ ಸಂರಕ್ಷಕರು ” ಎಂಬ ಮಕ್ಕಳ ಕನ್ನಡ ಕಾದಂಬರಿ ರಚಿಸುವುದರೊಂದಿಗೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಕನ್ನಡದ ಕಿರಿಯ ಲೇಖಕಿ “ಎಂಬ ಬಿರುದು ನೀಡಿ   ಮಾನ್ಯಳನ್ನು ಗೌರವಿಸಲಾಗಿದೆ. ”  ಕರ್ನಾಟಕ ಬುಕ್ ಆಫ್ ರೆಕಾರ್ಡ್ “, ” ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ” ವತಿಯಿಂದಲೂ ಈ ಪುಟ್ಟ ಬಾಲಕಿಗೆ ಬಿರುದಿನ ಸನ್ಮಾನ-ಗೌರವ ನೀಡಲಾಗಿದೆ.

2021 ರಲ್ಲಿ,  ಕರೋನ ಎರಡನೇ ಅಲೆಯ ನಡುವೆಯೂ ಪ್ರಕೃತಿ ಪ್ರೇಮ ಮೆರೆದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ  ಮಾನ್ಯ  ಯಶಸ್ವಿಯಾಗಿದ್ದಾಳೆ.

ಬೆಂಗಳೂರಿನ ವಿಬ್ಗಯಾರ್ ಶಾಲೆಯ ಐದನೇ ತರಗತಿಯಲ್ಲಿ ಓದುತ್ತಿರುವ ಮಾನ್ಯ,  ಬೆಂಗಳೂರಿನ ಜೆ.ಪಿ. ನಗರ ನಿವಾಸಿಗಳಾದ ಚಿತ್ರ-ಹರ್ಷ ದಂಪತಿಗಳ ಮಗಳಾಗಿದ್ದು,  ಪರಿಸರ ಜಾಗೃತಿ ಬಗ್ಗೆ ಆಂಗ್ಲ ಭಾಷೆಯಲ್ಲಿ ಮೂರು ಹಾಗೂ ಕನ್ನಡದಲ್ಲಿ ಎರಡು ಪುಸ್ತಕಗಳನ್ನು ಬರೆದಿದ್ದಾಳೆ.

ಪ್ರಸ್ತುತ ತನ್ನ ಮುಂದಿನ ಕನ್ನಡ-ಆಂಗ್ಲ ಭಾಷೆಯ ಕೃತಿಯ ಮೇಲೆ ಗಮನ ಹರಿಸಿರುವ ಈ ಬಾಲಕಿ,  ಈ ಪುಸ್ತಕವೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ವಿಷಯ ಆಧಾರಿಸಿದ ಕೃತಿ ಆಗಿದೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version