ದಿನದ ಸುದ್ದಿ
ಚಾಮುಂಡಿ ಬೆಟ್ಟದ ಆವರಣದಲ್ಲಿ ‘ಮಾರನಾಯಕರ’ ಪುತ್ತಳಿ ನಿರ್ಮಾಣಕ್ಕೆ ಆಗ್ರಹ
ಸುದ್ದಿದಿನ,ಮೈಸೂರು: ಚಾಮುಂಡಿ ಬೆಟ್ಟದ ಆವರಣದಲ್ಲಿ ಮಾರನಾಯಕರ ಪುತ್ತಳಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಕೀಲ ಪಡುವಾರಹಳ್ಳಿ ಎಂ. ರಾಮಕೃಷ್ಣ ನೇತೃತ್ವದಲ್ಲಿ ನಾಯಕ ಸಮುದಾಯ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಮೈಸೂರಿನ ಮೂಲ ನಿವಾಸಿಗಳಾಗಿದ್ದು ಚಾಮುಂಡಿ ಬೆಟ್ಟದ ಮೇಲಿರುವ ಮಹಾಬಲ್ಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಾರನಾಯಕರ ವಿಗ್ರಹವಿದ್ದು ಹೀಗಾಗಿ ಮಾರನಾಯಕರ ಪುತ್ತಳಿಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243