ದಿನದ ಸುದ್ದಿ
ಔಷಧಗಳ ಬೆಲೆ ಇಳಿಸಿದ ಕೇಂದ್ರ ಸರ್ಕಾರ
ಸುದ್ದಿದಿನ ಡೆಸ್ಕ್ : ಮಧುಮೇಹ, ಹೃದಯ ಮತ್ತು ಯಾಕೃತ್ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಒಟ್ಟು 41 ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ತಗ್ಗಿಸಿದೆ.
ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಔಷಧಗಳನ್ನು ಒದಗಿಸಲು ರಾಷ್ಟ್ರೀಯ ಔಷಧೀಯ ಪ್ರಾಧಿಕಾರ-ಎನ್‌ಪಿಪಿಎ ಈ ನಿರ್ಧಾರವನ್ನು ಕೈಗೊಂಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನೂತನ ದರವನ್ನು ಅನುಷ್ಠಾನಗೊಳಿಸಿ ಎಲ್ಲಾ ಔಷಧ ಕಂಪನಿಗಳು ಮತ್ತು ಮಾರಾಟಗಾರರಿಗೆ ಎನ್‌ಪಿಪಿಎ ಸೂಚಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243