ದಿನದ ಸುದ್ದಿ
ನಾಳೆ ಆರು ಬೋಗಿಯ ಮೆಟ್ರೋ ರೈಲು ಚಾಲನೆಗೆ ಹೆಚ್.ಡಿ.ಕೆ. ಹಸಿರು ನಿಶಾನೆ
ಸುದ್ದಿದಿನ, ಬೆಂಗಳೂರು : ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆರು ಬೋಗಿಯ ಮೆಟ್ರೋ ಹಸಿರು ನಿಶಾನೆ ತೋರಿದ್ದಾರೆ. ನಾಳೆಯಿಂದ ಎರಡನೇ ಆರು ಬೋಗಿಯ ಮೆಟ್ರೋ ಸೇವೆಗೆ ಚಾಲನೆ ನೀಡಲಿದ್ದಾರೆ.
ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ ವರಗೆ ಚಲಿಸಲಿರುವ ಮೆಟ್ರೋ ರೈಲು ಸಂಚಾರ ದಟ್ಟಣೆ ಹೆಚ್ಚಿರುವ ಬೈಯಪ್ಪನ ಹಳ್ಳಿ – ಮೈಸೂರು ರಸ್ತೆ ಮಾರ್ಗದಲ್ಲಿ ಚಲಿಸಲಿದೆ. 1463 ಕೋಟಿ ವೆಚ್ಚದಲ್ಲಿ 150 ಹೊಸ ಬೋಗಿ ಪೂರೈಸಲು ಬಿಎಂಆರ್ ಸಿಎಲ್ , ಬಿಇಎಂಎಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಆರು ಬೋಗಿ ಪೂರೈಕೆ ಮಾಡಿದ್ದು, ಇನ್ನು 144 ಬೋಗಿ ಪೂರೈಕೆ ಮಾಡಬೇಕಿದೆ. ಮುಂದಿನ ವರ್ಷ ಜೂನ್ ಒಳಗಡೆ ಇನ್ನುಳಿದ ಬೋಗಿಯನ್ನು ಬಿಇಎಂಎಲ್ ಪೂರೈಸಬೇಕಿದೆ. ಆರು ಬೋಗಿಯ ಮೆಟ್ರೋದಲ್ಲಿ ಒಂದೇ ಸಲ 2,004 ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401