ಲೈಫ್ ಸ್ಟೈಲ್
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪರಿಣಾಮ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ..!
Leo Henricus Arthur Baekland ಅವರು 1907ರಲ್ಲಿ Bakellite ಎಂಬ synethic ವಸ್ತುವಿನಿಂದ ಪ್ಲಾಸ್ಟಿಕ್ ಅನ್ನು ಕಂಡುಹಿಡಿದರು. ಇದನ್ನು ಕಂಡು ಹಿಡಿದ ಮೇಲೆ ಜನಕ್ಕೆ ಪ್ರತಿದಿನ ತುಂಬ ಉಪಯೋಗವಾಗಲು ಶುರುವಾಯಿತು. ವರ್ಷ ಕಳೆದಂತೆ ಜನಗಳಿಗೆ ಪ್ಲಾಸ್ಟಿಕ್ ಇಲ್ಲದೇ ದಿನವೇ ಸಾಗದಂತೆ ಆಗಿದೆ. ಈ ಪ್ಲಾಸ್ಟಿಕ್ ಮನುಷ್ಯರ ದೇಹದ ಅಂಗಗಳ ರೀತಿಯಲ್ಲಿ ಒಂದು ಅಂಗವಾಗಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗು ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ಅನ್ನು ಬಳಸುತ್ತೇವೆ. ಪ್ಲಾಸ್ಟಿಕ್ ಕಂಡು ಹಿಡಿದು ಇಲ್ಲಿಗೆ 111 ವರ್ಷವಾಗಿದೆ. ಅದರೆ ನಮ್ಮ ಜನರಿಗೆ ಇದು ಪ್ರಪಂಚ ಹುಟ್ಟಿದಾಗಿನಿಂದ ಈ ಪ್ಲಾಸ್ಟಿಕ್ ಇತ್ತೇನೊ ಅನ್ನೊ ಮಟ್ಟಿಗೆ ಅದನ್ನು ಅವಲಂಬಿಸಿದ್ದಾರೆ.
ಈ ಪ್ಲಾಸ್ಟಿಕ್ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತು. ಆರಾಮವಾಗಿ ಎಲ್ಲಾ ಕಡೆ ಸಿಗುತ್ತದೆ ಮತ್ತು ಕೊಂಡೊಯ್ಯಲು ಸುಲಭ ಎಂದು ಜನರ ನಂಬಿಕೆ. ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬಹುದು ,ಇದರಿಂದ ತೊಂದರೆ ಆಗುವುದಿಲ್ಲ ಎಂದು ತಿಳಿದಿದರು. ಆದರೆ ಎಲ್ಲಾ ಪ್ಲಾಸ್ಟಿಕ್ ಅನ್ನು ನಾವು ಮರುಬಳಕೆ ಮಾಡಲು ಆಗುವುದಿಲ್ಲ ಎಂದು ಈಗ ನಮಗೆ ತಿಳಿದಿರುವ ವಿಷಯ. 20% ಅಷ್ಟೇ ಪ್ಲಾಸ್ಟಿಕ್ ಅನ್ನು ಮಾತ್ರ ಮರುಬಳಕೆ ಮಾಡಬಹುದು. ಇನ್ನೂ ಸ್ವಲ್ಪ ಸುಟ್ಟು ಹಾಕುತ್ತಾರೆ.
ಈ ಪ್ಲಾಸ್ಟಿಕ್ ನಮ್ಮಗೆ ಎಷ್ಟು ಉಪಯೋಗವೊ ಅದಕ್ಕಿಂತ ಹೆಚ್ಚು ಅಪಯಾಕಾರಿಯು ಹೌದು. ಈ ನೀರಿನ ಬಾಟಲ್, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟಗಳು, ಇನ್ನೂ ಹಲವು ಪ್ಲಾಸ್ಟಿಕ್‌ಗಳನ್ನು ನಾವು ಮರುಬಳಕೆ ಮಾಡಲು ಆಗುವುದಿಲ್ಲ. ಅವನ್ನೂ ಜನ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದು ನಗರದಲ್ಲಿ ಹೆಚ್ಚು ಹಳ್ಳಿ ಹಾಗೂ ಪಟ್ಟಣದಲು ಕೂಡ ಹೆಚ್ಚಾಗುತ್ತಿದೆ.
ಈಗಾಗಲೇ ಹಸುಗಳು, ಜಲಚರ ಪ್ರಾಣಿಗಳ ಮತ್ತು ಇನ್ನೂ ಇತರ ಪ್ರಾಣಿಗಳ ಹೊಟ್ಟೆ ಸೇರಿ ಈ ಪ್ಲಾಸ್ಟಿಕ್ ಎಲ್ಲವನ್ನೂ ಬಲಿತೆಗೆದು ಕೊಳ್ಳುತ್ತಿದೆ. ಈಗ ಅದು ಮನುಷ್ಯರಾದ ನಮ್ಮ ಸರದಿ. ನೇರವಾಗಿ ಹಾನಿಯಾಗದಿದರು ಅದರಿಂದ ತುಂಬಾನೆ ಅಪಾಯವಂತು ಇದೇ.
ಈ ಪ್ಲಾಸ್ಟಿಕ್ ನಮ್ಮ ದೇಹಕ್ಕೆ ಹೇಗೆ ಸೇರುತ್ತದೆ? ನಮ್ಮನ್ನು ಹೇಗೆ ಬಲಿ ತೆಗೆದುಕೊಂಡಿತು ಎಂದು ಪ್ರಶ್ನೆ? ನಗರ, ಪಟ್ಟಣ, ಹಳ್ಳಿಗಳಲ್ಲಿನ ಪ್ಲಾಸ್ಟಿಕ್ ಕೆಲ ಪ್ರಾಣಿಗಳನ್ನು ಬಲಿ ತೆಗೆದುಕೊಂಡರೆ, ಈ ನಗರ,ಪಟ್ಟಣ,ಹಳ್ಳಿಗಳಿಂದ ನದಿ, ಸಮುದ್ರ, ಸಾಗರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್ ಇಡೀ ಮನುಕುಲಕ್ಕೆ ಹಾನಿಯನ್ನು ಉಂಟುಮಾಡುತ್ತಿದೆ.
ಹೇಗೆ ಪ್ಲಾಸ್ಟಿಕ್ ಸಾಗರದವರೆಗು ಸೇರುತ್ತದೆ ಎಂದರೆ ಮುಖ್ಯವಾಗಿ ಕಾರ್ಖಾನೆಗಳಿಂದ, ಬಟ್ಟೆ ತೊಳೆಯುವುದರಿಂದ, ಇನ್ನೂ ಮುಖ್ಯವಾಗಿ ಮನುಷ್ಯ ನದಿಗೆ ಹಾಕುವ ಕಸದಿಂದ, ಮಳೆ ಬಂದಾಗ ಭೂಮಿಯಲ್ಲಿನ ಪ್ಲಾಸ್ಟಿಕ್ ನದಿ ಸೇರಿ, ನದಿಯಿಂದ ಸಮುದ್ರಕ್ಕೆ, ಸಮುದ್ರದಿಂದ ಸಾಗರಕ್ಕೆ ಸೇರುತ್ತಿದೆ.
ಈ ಪ್ಲಾಸ್ಟಿಕ್ ಸಂಪೂರ್ಣವಾಗಿ ಕರಗದೆ ಕ್ರಮೇಣವಾಗಿ ಚಿಕ್ಕ ಚಿಕ್ಕ ಮೈಕ್ರೋಪ್ಲಾಸ್ಟಿಕ್ ಅಗಿ ಬದಲಾಗಿ ಎಲ್ಲಾ ಜಲಚರ ಪ್ರಾಣಿಗಳಿಗೆ ಸೇರುತ್ತಿದೆ. ಆಹಾರ ಕೊಂಡಿಯ ಮೂಲಕ ಜಲಚರ ಪ್ರಾಣಿಗಳು ಹಾಗೂ ಸಮುದ್ರದ ನೀರಿನಲ್ಲಿ ಸೇರಿ ಅದು ಮನುಷ್ಯನ ದೇಹ ಸೇರುತ್ತಿದೆ. ಅಬ್ಬಾ ಅದು ಬರಿ ಮಾಂಸಾಹಾರಿಗಳಿಗೆ ಮಾತ್ರ ಸೇರುತೆ ನಮಗಲ್ಲ ಎಂದು ಸಸ್ಯಹಾರಿಗಳ ಭಾವನೆ. ಆದರೆ ಈಗ ಅದು ಸಸ್ಯಹಾರಿಗಳಿಗು ಉಪ್ಪು ಹಾಗೂ ಮಿನರಲ್ ವಾಟರ್ ಈ ಎರಡು ಬಗ್ಗೆ ಯಾಗಿ ಸೇರುತ್ತಿದೆ.
ಹೌದು ,ಐಐಟಿ ಬಾಂಬೆಯವರು ಭಾರತದ ಉಪ್ಪಿನ ಬ್ರಾಂಡ್‌ಗಳ ಸುಮಾರು 24 ಕೆ.ಜಿ.ಉಪ್ಪನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಸಾಮಾನ್ಯ ಉಪ್ಪಿನಲ್ಲಿ 63% ರಷ್ಟು, ಬ್ರಾಂಡೆಡ್ ಉಪ್ಪಿನಲ್ಲಿ 37%ರಷ್ಟು ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ. ಇನ್ನೂ ಎರಡನೆಯದು ನಾವು ಶುದ್ಧ , ಖನಿಜಯುಕ್ತ ಎಂದು ಭಾವಿಸಿ ಕುಡಿಯುವ ಬಾಟಲ್ ನೀರಿನಲ್ಲಿ ಈ ಮೈಕ್ರೋಪ್ಲಾಸ್ಟಿಕ್ ಇದೇ. ಪ್ರೆಡೋನಿಯಾದ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕಿನ ವಿಜ್ಞಾನಿಗಳು ಅಮೆರಿಕ, ಭಾರತ, ಚೀನಾ, ಇಂಡೋನೇಷ್ಯಾ, ಮೆಕ್ಸಿಕೊ, ಲೆಬನಾನ್, ಕೀನ್ಯಾ ದೇಶಗಳ 19 ಭಿನ್ನ ಪ್ರದೇಶಗಳಿಂದ 11 ವಿವಿಧ ಕಂಪನಿಗಳ 259 ಬಾಟಲ್ ನೀರು ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ಕೇವಲ17 ಬಾಟಲಿಗಳಲ್ಲಿದ್ದ ನೀರು ಕುಡಿಯಲು ಯೋಗ್ಯ ಮತ್ತು ಸುರಕ್ಷಿತ ಎಂದು ಪತ್ತೆ ಹಚ್ಚಿದಾರೆ.
ಮುಖ್ಯವಾಗಿ, ಪಾಲಿಪ್ರೊಪಲಿನ್ ಎಂಬ ಪ್ಲಾಸ್ಟಿಕ್ ಕಣಗಳು ಈ ಬಾಟಲ್ ನೀರಿನ ಪ್ರತಿ ಲೀಟರಿಗೆ ಸರಾಸರಿ 58.6 ಪ್ಲಾಸ್ಟಿಕ್ ಫೈಬರ್ ಪತ್ತೆಯಾಗಿದೆ.
ಈ ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹಕ್ಕೆ ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗಿದೆ. ನರ ಸಂಬಂಧಿಸಿದ ಕಾಯಿಲೆ, ಥೈರಾಯಿಡ್ ತೊಂದರೆ, ಕ್ಯಾನ್ಸರ್, ಆಸ್ತಮಾ ಹಾಗೂ ಹೃದಯ ಕಾಯಿಲೆಗಳು, ಲೈಂಗಿಕ ದೌರ್ಬಲ್ಯ, ಜತಗೆ ಕೂದಲು ಮತ್ತು ಚರ್ಮ ಸಮಸ್ಯೆಗಳಿಗೆ ಈ ಮೈಕ್ರೋಪ್ಲಾಸ್ಟಿಕ್ ಕಾರಣವಾಗಿದೆ. ಇನ್ನೂ ಇದರಿಂದಾಗುವ ಅಗುತ್ತಿರುವ ತೊಂದರೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇಂದು ನಮ್ಮ ಮಹಾ ಸಾಗರಗಳು ಅಂದಾಜು 15 ಕೋಟಿ ಟನ್ನಿನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಒಳಗಿರಿಸಿಕೊಂಡಿದೆ ಎಂದು ವರದಿಯಾಗಿದೆ.
ನಾವು ಈಗ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಳಕೆ ಮಾಡದಿರಲು ಸಾಧ್ಯವಿಲ್ಲ ಅದರೇ ನಮ್ಮಲ್ಲಿ ಒಂದು ಚಿಕ್ಕ ಜಾಗೃತಿ ಮೂಡಿದರೆ ಮುಂದೆ ಅಗುವಾ ಈ ದೊಡ್ಡ ಪ್ಲಾಸ್ಟಿಕ್ ಸಮಸ್ಯೆಯನ್ನು ಸ್ವಲ್ಪವಾದರೂ ತಡೆಯಬಹುದು.ದೊಡ್ಡ ದೊಡ್ಡ ಆಹಾರ , ಎಣ್ಣೆ, ಪಾನಿಯಾ ಕಂಪನಿಗಳು ನೈಸರ್ಗಿಕವಾಗಿ ಬೇಗ ಕರಗುವಂತವುದರಲ್ಲಿ ಪ್ಯಾಕಿಂಗ್ ಮಾಡಿದರೆ ಎಷ್ಟೋ ಪ್ಲಾಸ್ಟಿಕ್ ಸಮಸ್ಯೆ ಬಗ್ಗೆ ಹರಿಯುತ್ತದೆ. ಸರ್ಕಾರ ಅವರು ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದರು ಅದು ಕಾರ್ಯ ರೂಪದಲ್ಲಿ ನೆಡೆಯುತ್ತಿಲ್ಲ. ಅದುದರಿಂದ ಇದು ನಮ್ಮಲ್ಲೆ ಜಾಗೃತಿ ಮೂಡಿದರೆ ಮಾತ್ರ ಸಾಧ್ಯ.
ಪ್ಲಾಸ್ಟಿಕ್ ಯಿಂದ ಅಗುವ ತೊಂದರೆ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.
-ಸೌಮ್ಯ ಅಶೋಕ್
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401