ದಿನದ ಸುದ್ದಿ

ಕಾಣೆಯಾದವರ ಬಗ್ಗೆ ಪ್ರಕಟಣೆ

Published

on

ಸುದ್ದಿದಿನ,ದಾವಣಗೆರೆ : ನಗರದ ಶ್ರೀರಾಮನಗರದ ಬಸವಬುದ್ಧ ಭೀಮಾ ನಗರ 1ನೇ ಮೇನ್, 3ನೇ ಕ್ರಾಸ್ ವಾಸಿ ಚಂದ್ರಪ್ಪ ಎಂಬುವವರು ನವೆಂಬರ್ 23-2020 ರಂದು ತನ್ನ ಮಗಳ ಮನೆಯಿಂದ ತನ್ನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಕಾಣೆಯಾಗಿರುತ್ತಾರೆ.

ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೆಂಚಮ್ಮ ದೂರು ದಾಖಲಿಸಿದ್ದಾರೆ. 51 ವರ್ಷದ ಈತ ವಾಚ್ ಮ್ಯಾನ್ ಕೆಲಸ ಮಾಡುತಿದ್ದ. 5 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಬಲಗಡೆ ತೊಡೆಯಲಿ ಕೊಯ್ದಿರುವ ಗಾಯ, ಬೆನ್ನಿನ ಎಡಗಡೆ ಭಾಗದಲ್ಲಿ ಕಪ್ಪು ಮಚ್ಚೆ ಇದೆ.

ಈ ಚಹರೆವುಳ್ಳ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ವಿದ್ಯಾನಗರ ಪೊಲೀಸ್ ಠಾಣೆ 08192-262688, 9480803251 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version