ದಿನದ ಸುದ್ದಿ
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
ಸುದ್ದಿದಿನ,ಬೆಂಗಳೂರು: ಬುಧವಾರ ಸಚಿವ ಸಂಪುಟದಿಂದ ಕೊಕ್ ನೀಡಿದ್ದ ನಾಗೇಶ್ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ನಾಗೇಶ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಹುದ್ದೆಯನ್ನು ನೀಡಿದ್ದಾರೆ. ನಾಗೇಶ್ ಅವರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾರೆ.
ಈ ಮೂಲಕ ಸಚಿವರಾಗಿದ್ದ ನಾಗೇಶ್ ಅವರನ್ನು ಸಮಾಧಾನ ಪಡಿಸಲು ಸಿಎಂ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬುಧವಾರ ಬೆಳಗ್ಗೆಯಷ್ಟೇ ನಾಗೇಶ್ ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಗಿತ್ತು, ಆದರೆ ಸಂಜೆಯಷ್ಟೊತ್ತಿಗೆ ಮತ್ತೊಂದು ಮಹತ್ವದ ಹುದ್ದೆಯನ್ನು ನೀಡುವುದರ ಮೂಲಕ ಯಡಿಯೂರಪ್ಪ ಹೊರ ಬೇಕಾಗಿದ್ದ ಅಪವಾದದಿಂದ ದೂರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243