ಸಿನಿ ಸುದ್ದಿ
ಹಾಸ್ಯನಟ ಮೋಹನ್ ಜೂನೇಜ ಹೃದಯಾಘಾತದಿಂದ ನಿಧನ
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟ ಮೋಹನ್ ಜೂನೇಜ (54) ಅವರು ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಜೂನೇಜ ಅವರು ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಬಹುತೇಕ ಕನ್ನಡದ ನಾಯಕ ನಟರೊಂದಿಗೆ ಇವರು ತೆರೆ ಹಂಚಿಕೊಂಡಿದ್ದರು, ಕೆಜಿಎಫ್ ಸಿನೆಮಾದಲ್ಲೂ ಒಂದು ಪಾತ್ರ ಮಾಡಿದ್ದರು. ಚೆಲ್ಲಾಟ, ರಾಮ್ ಸೇರಿದಂದೆ ಹಲವು ಯಶಸ್ವಿ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.
ಮೋಹನ್ ಅವರ ಅಕಾಲಮರಣಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಕಂಬನಿ ಮಿಡಿದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243