ದಿನದ ಸುದ್ದಿ
ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ಭೌದ್ದಿಕ ದಿವಾಳಿತನದ್ದು : ಯುವ ಕಾಂಗ್ರೆಸ್ ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ಕಿಡಿ
ಸುದ್ದಿದಿನ,ಹೊನ್ನಾಳಿ : ಮಹಿಳೆಯರ ಉಡುಪುಗಳು ಅತ್ಯಾಚಾರಕ್ಕೆ ಕಾರಣ ಎಂಬ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ಅವರ ಭೌದ್ದಿಕ ದಿವಾಳಿತನವನ್ನು ತೋರಿಸುತ್ತಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ಕುಟುಕಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು ರೇಣುಕಾರ್ಯರವರ ಈ ಹೇಳಿಕೆ ನಿಜಕ್ಕೂ ಮಾನಸಿಕ ದಿವಾಳಿತನದ್ದು. ಮಹಿಳೆಯರ ಉಡುಪುಗಳು ಪುರುಷರನ್ನು ಉದ್ರೇಕಗೊಳಿಸತ್ತವೆ ಎಂಬುದು ಅವರ ಮನುವಾದದ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದರು.
ಅತ್ಯಾಚಾರಗಳು ಬರೀ ವಯಸ್ಕರು ಮತ್ತು ಕಾಲೇಜು ವಿದ್ಯಾರ್ಥಿಗಳ ಮೇಲೆ ಅಷ್ಟೆ ಅಲ್ಲ ಸಣ್ಣ ಸಣ್ಣ ಮಕ್ಕಳ ಮೇಲೂ ನಡೆಯುತ್ತಿವೆ ಅಂತಹ ಪ್ರಕರಣಗಳಲ್ಲಿ ಉಡುಪಿನ ಪ್ರಶ್ನೆ ಬರುತ್ತೆ ಹಾಗದ್ರೆ ಮಾನ್ಯ ಶಾಸಕರೆ ಎಂದು ಪ್ರಶ್ನಿಸಿದರು.
ಜೊತೆಗೆ ಭಾರತದ ಸಂವಿಧಾನ ಪ್ರತಿಯೊಬ್ಬರಿಗೆ ತಮಗೆ ಬೇಕಾದ ರೀತಿಯಲ್ಲಿ ವಸ್ತ್ರಧರಿಸುವ ಅವಕಾಶ ನೀಡಿದೆ. ಆ ಪ್ರಕಾರ ಮಹಿಳೆಯರು ತಮಗೆ ಬೇಕಾದ ಸಂಧರ್ಭದಲ್ಲಿ ಬೇಕಾದ ಬಟ್ಟೆ ಹಾಕುತ್ತಾರೆ. ಅದನ್ನು ಪ್ರಶ್ನಿಸಲು ನೀವು ಯಾರು. ಹಾಗೆನಾದರೂ ಪ್ರಶ್ನಿಸುವ ಮನಸ್ಥಿತಿ ನಿಮಗೆ ಇದ್ದರೆ ಒಂದು ಸಾರಿ ನಿಮ್ಮ ವೈಯಕ್ತಿಕ ಬದುಕನ್ನು ವಿಮರ್ಶೆಗೆ ಒಳಪಡಿಸಿ ನೋಡಿಕೊಳ್ಳಿ ಎಂದು ಹೇಳಿದರು.
ಇನ್ನೂ ರೇಣುಕಾಚಾರ್ಯ ಮಹಿಳಾ ಶೋಷಣೆ ಬಗ್ಗೆ ಮಾತನಾಡುವುದು ಭೂತದ ಭಾಯಲ್ಲಿ ಭಗವತ್ ಗೀತೆ ಬಂದಂತೆ ಯಾಕೆಂದರೆ ಸ್ವತಃ ಇವರ ಮೇಲೆ ಅಂತಹ ಆರೋಪಗಳು ಬಂದಿವೆ. ಅದನ್ನು ಬಹುತೇಕ ಮಾಧ್ಯಮಗಳಲ್ಲಿ ಜನರು ನೋಡಿದ್ದಾರೆ. ಇಂತಹ ವ್ಯಕ್ತಿ ಅತ್ಯಾಚಾರಗ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಿಡಿಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243