ದಿನದ ಸುದ್ದಿ
ಸ್ವಾತಂತ್ರ್ಯ ದಿನದಂದು ಲಡಾಖ್ನಲ್ಲಿ ಎಂ.ಎಸ್.ಧೋನಿ ದ್ವಜಾರೋಹಣ..?
ಸುದ್ದಿದಿನ ಡೆಸ್ಕ್ : ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸೈನಿಕರೊಂದಿಗೆ ಕಾಶ್ಮೀರದಲ್ಲಿ ಗಡಿ ಕಾಯ್ತಿರೋ ಎಂ ಎಸ್ ಧೋನಿ ಭಾರತೀಯ ಸೇನೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎನ್ನಲಾಗ್ತಿದೆ.
ನಾಳೆ ಆಗಸ್ಟ್ 10ರಂದು ಧೋನಿ ಲಡಾಖ್ನ ಲೇಹ್ಗೆ ಪ್ರಯಾಣ ಮಾಡಲಿದ್ದು,. ಹೊಸ ಕೇಂದ್ರಾಡಳಿತ ಪ್ರದೇಶವಾಗಿರುವ ಲೇಹ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಧೋನಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ 370 ಆರ್ಟಿಕಲ್ ಅನ್ನು ರದ್ದುಗೊಳಿಸಿದ ಕಾರಣ ಕಾಶ್ಮೀರದಲ್ಲಿ ಹೈ ಅಲರ್ಟ್ ಆಗಿರುವ ಸೇನೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದೆ.