ದಿನದ ಸುದ್ದಿ

ಹಿಂಗಾರು ಹಂಗಾಮಿನ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Published

on

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಹಿಂಗಾರು ಬೆಳೆ ಮಾರುಕಟ್ಟೆ ಹಂಗಾಮಿನ ಎಲ್ಲ ಬೆಳೆಗಳ ಕನಿಷ್ಟ ಬೆಂಬಲ ಬೆಲೆ-ಎಂಎಸ್‌ಪಿ ( MSP) ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ( Central Government ) ಇಂದು ಅನುಮೋದನೆ ನೀಡಿದೆ.

ಪ್ರತಿ ಕ್ವಿಂಟಾಲ್ ಗೋಧಿಗೆ 119 ರೂಪಾಯಿ, ಬಾರ್ಲಿಗೆ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಾಸುವೆ ಕನಿಷ್ಟ ಬೆಂಬಲ ಬೆಲೆಯನ್ನು 400 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸೂರ್ಯಕಾಂತಿಗೆ 209 ರೂಪಾಯಿ, ಕಡಲೆಗೆ 105 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರೊಂದಿಗೆ ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2ಸಾವಿರದ 15 ರೂಪಾಯಿಯಿಂದ 2 ಸಾವಿರ 125ರೂಪಾಯಿ ಹೆಚ್ಚಳವಾಗಿದೆ. ಬಾರ್ಲಿ 1 ಸಾವಿರದ 635 ರೂಪಾಯಿಯಿಂದ 1 ಸಾವಿರದ 735 ರೂಪಾಯಿ, ಕಡಲೆ 5 ಸಾವಿರದ 230 ರಿಂದ 5 ಸಾವಿರದ 330 ರೂಪಾಯಿ, ಮಸೂರ್ ಪ್ರತಿ ಕ್ವಿಂಟಾಲ್‌ಗೆ 5 ಸಾವಿರ 335 ರಿಂದ 6 ಸಾವಿರದ 335 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸಾಸುವೆ 5 ಸಾವಿರದ 59 ರೂಪಾಯಿನಿಂದ 5 ಸಾವಿರದ 450 ರೂಪಾಯಿಗೆ ಸೂರ್ಯಕಾಂತಿ 5 ಸಾವಿರದ 441 ರೂಪಾಯಿಯಿಂದ 5 ಸಾವಿರದ 650 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version