ದಿನದ ಸುದ್ದಿ

ದಾವಣಗೆರೆ | ಅಲಾವಿ ದೇವರ ವಸ್ತುಗಳ ಕದ್ದು ರಸ್ತೆಗೆ ಬಿಸಾಕಿದ ಕಳ್ಳರು

Published

on

ಸುದ್ದಿದಿನ,ದಾವಣಗೆರೆ:ನಗರದ ಹಳೇ ಕುಂದುವಾಡದಲ್ಲಿ ಮಕಾನ್ ಬಾಗಿಲು ಹೊಡೆದು ಒಂದುವಾರದ ಹಿಂದೆ ಕಳ್ಳತನ ಮಾಡಿದ್ದ ಅಲಾವಿ ದೇವರ ವಸ್ತುಗಳನ್ನು ಇಂದು ರಸ್ತೆ ಬದಿಯಲ್ಲಿ ಕಳ್ಳರು ಬಿಸಾಕಿ ಹೋದ ಘಟನೆ ನಡೆದಿದೆ.

ಸಂಶಯ ಬಾರದಂತೆ ದೇವರ ಮೇಲೆ ಕಾರದ ಪುಡಿ ಚೆಲ್ಲಿದ ಕಳ್ಳರು ಸುದ್ದಿ ಆಗುತ್ತಿದ್ದಂತೆ ಹೆದರಿ ದೇವರ ವಸ್ತುಗಳನ್ನು ಬಿಟ್ಟು ಪರಾರಿಯಾಗಿರುವ ಶಂಕೆವ್ಯಕ್ತವಾಗಿದೆ.

ಹಲವು ಪವಾಡಗಳಿಗೆ ಸಾಕ್ಷಿಯಾಗಿದ್ದ ದೇವರ ವಸ್ತು ಕದ್ದು ವಾಪಾಸ್ ಬಿಸಾಡಿ ಹೋದ ಕಳ್ಳರನ್ನು ಬಿಡ ಬೇಡಿ ಎಂದು ಪೊಲೀಸರಿಗೆ ಗ್ರಾಮಸ್ಥರು ಮನವಿಮಾಡಿದ್ದಾರೆ‌.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ವಾರ ಮೊಹರಂ ಹಬ್ಬ ಹಿನ್ನಲೆ ಇಂದು ಮಹಜರ್ ನಡೆಸಿ ದೇವರುಗಳನ್ನ ಸಮಾಜದ ಮುಖಂಡರಿಗೆ ಪೊಲೀಸರು ಹಸ್ತಾಂತರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version