ದಿನದ ಸುದ್ದಿ
ಮಾರ್ವಾಡಿ ಮರ್ಡರ್..!
ಸುದ್ದಿದಿನ,ಚಿತ್ರದುರ್ಗ : ಆತ ದೂರದ ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದ, ಚಿನ್ನದ ಆಭರಣಗಳನ್ನ ಗಿರಿವಿ ಇಟ್ಟುಕೊಳ್ಳುವ ಲೇವಾದೇವಿ ವ್ಯವಹಾರ ಮಾಡುತ್ತಾ ಬದುಕು ಸಾಗಿಸುತ್ತಿದ್ದವನನ್ನ ರಾತ್ರಿ ಊಟಕ್ಕೆ ಕೂರುವ ಸಮಯಕ್ಕೆ ಸರಿಯಾಗಿ ಬಂದ ಯಾರೋ ದುಷ್ಕರ್ಮಿಗಳು, ಆತನನ್ನ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅಷ್ಟಕ್ಕೂ ಆತನನ್ನ ಕೊಂದವರು ಯಾರು? ಯಾತಕ್ಕಾಗಿ ಆತನ ಕೊಲೆ ನಡೆದಿರಬಹುದು ಅನ್ನೋ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಮೂಲತಃ ರಾಜಸ್ಥಾನದ ಜೋಧ್‌ಪುರ್ ಜಿಲ್ಲೆ ಬಾರ್ನ್ ಗ್ರಾಮದ ಸುಮಾರು 58 ವರ್ಷ ವಯಸ್ಸಿನ ಕಲ್ಯಾಣ್ ಸಿಂಗ್, ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗಿರವಿ ಅಂಗಡಿ ಇಟಕ್ಕೊಂಡು ಲೇವಾದೇವಿ ವ್ಯವಹಾರ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ರು. ಕಳೆದ ಏಳೆಂಟು ವರ್ಷಗಳಿಂದ ಹೆಂಡಿತಿಯಿಂದ ದೂರಾಗಿ ರಾಮಗಿರಿಯಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ ಕಲ್ಯಾಣ್ ಸಿಂಗ್‌ಗೆ ಇಬ್ಬರು ಗಂಡು ಮಕ್ಕಳಿದ್ದು, ಅವರೂ ಕೂಡ ಜೊತೆಯಲ್ಲಿಲ್ಲ. ಹೀಗಿರುವಾಗ ನಿನ್ನೆ ರಾತ್ರಿ ಊಟಕ್ಕೆ ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ಯಾರೋ ದುಷ್ಕರ್ಮಿಗಳು ಬಂದು ಕಲ್ಯಾಣ್ ಸಿಂಗ್‌ರನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಇನ್ನೂ ಕೊಲೆ ನಡೆಯುವ ಮುನ್ನ ಕಲ್ಯಾಣ್ ಸಿಂಗ್ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದ ಬಗ್ಗೆ ಅದೇಗೋ ಮಾಹಿತಿ ಕಲೆಹಾಕಿದ ಹೊಳಲ್ಕೆರೆ ಪೊಲೀಸರು, ಅದೇ ಗ್ರಾಮದಲ್ಲಿ ವಾಸವಿದ್ದ ಅವರದೇ ಜನಾಂಗದ ಜನರಿಗೆ ಮಾಹಿತಿ ನೀಡಿ ಕಲ್ಯಾಣ್ ಸಿಂಗ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಬಂಧಿಕರ ಕಣ್ಣ ಮುಂದೆಯೇ ಬೈಕಿನಲ್ಲಿ ಬಂದಿದ್ದ ಮೂವರು ಹಂತಕರು ಪರಾರಿಯಾಗಿದ್ದಾರೆ. ತಕ್ಷಣ ಮನೆಯ ಒಳಹೊಕ್ಕು ನೋಡಿದಾಗ ಕಲ್ಯಾಣ್ ಸಿಂಗ್ ಬರ್ಬರವಾಗಿ ಹತ್ಯೆಯಾಗಿರೋದು ಕಂಡುಬಂದಿದೆ. ಹೀಗಾಗಿ ಕೌಟುಂಬಿಕ ಕಲಹದ ಕಾರಣದಿಂದಲೋ, ಅಥವಾ ಲೇವಾದೇವಿ ವ್ಯವಹಾರದಲ್ಲೋ ಈ ಕೊಲೆ ನಡೆದಿರಬಹುದು ಎಂದು ಅವರ ದೂರದ ಸಂಬಂಧಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದೂರದ ರಾಜಸ್ಥಾನದಿಂದ ಬದುಕು ಹರಸಿ ಕರ್ನಾಟದಲ್ಲಿ ನೆಲೆಕಂಡಿದ್ದ ಚಿನ್ನದ ಲೇವಾದೇವಿ ವರ್ತಕ, ಕುಟುಂಬದಿಂದಲೂ ದೂರಾಗಿ ಏಕಾಂಗಿ ಜೀವನ ಸಾಗಿಸಿ ಇದೀಗ ಅನುಮನಾಸ್ಪದವಾಗಿ ಕೊಲೆಯಾಗಿದ್ದು, ಮೃತನ ಕುಟುಂದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹೊಳಲ್ಕೆರೆ ಠಾಣೆ ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದು, ಪೊಲೀಸರ ತನಿಖೆಯಿಂದಷ್ಟೆ ಕೊಲೆಪಾತಕರು ಯಾರು? ಮತ್ತು ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಸತ್ಯ ಹೊರಬೀಳಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401