ದಿನದ ಸುದ್ದಿ
ನಾಡಹಬ್ಬ ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ ; ಉತ್ಸವಕ್ಕೆ ‘ಧನಂಜಯ’ ನ ಮೊದಲ ಎಂಟ್ರಿ..!
ಸುದ್ದಿದಿನ ಮಂಡ್ಯ : ಈ ಬಾರಿ ವೀರನಹೊಸಹಳ್ಳಿ ಪ್ರದೇಶದಲ್ಲಿರುವ ನಾಗರ ಹೊಳೆ ದ್ವಾರದಿಂದ ಗಜಪಯಣ ಕ್ಕೆ ಚಾಲನೆದೊರೆಯಿತು. ನಾಗಾಪುರ ಹಾಡಿ ಸಮೀಪ ಆಶ್ರಮ ಶಾಲೆ ಬಳಿ ಕಾರ್ಯಕ್ರಮ ಜರುಗಿತು.
ಶಾಸಕ ಎಚ್.ವಿಶ್ವನಾಥ್ ಸೂಚನೆ ಮೇರೆಗೆ ಹಿಂದಿನ ಸಂಪ್ರದಾಯದಂತೆ ಈಗಲೂ ಇದು ಮುಂದುವರಿದಿದೆ. ದ್ವಾರದ ಸಮೀಪ ಅಣಿಯಾಗಿರುವ ಕ್ಯಾಪ್ಟನ್ ಅರ್ಜುನ ಪಡೆಗೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ನಾಡ ಹಬ್ಬದಸರಾ ಮಹೋತ್ಸದ ಮೊದಲ ಗಜಪಯಣಕ್ಕೆ, ವೀರನಹೊಸಹಳ್ಳಿ ಬಳಿ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಐದು ಆನೆಗಳಿಗೆ ಪೂಜೆಕಾರ್ಯ ನೆರವೇರಿತು. ಇಲ್ಲಿ ಅರ್ಜುನ, (೫೮), ವರಲಕ್ಷ್ಮಿ (೬೨), ಹೆಣ್ಣಾನೆ, ವಿಕ್ರಮ (೪೫), ಚೈತ್ರ (೪೭), ವರ್ಷ ಹೆಣ್ಣಾನೆ, ಧನಂಜಯ (೩೫). ಧನಂಜಯ ಮೊದಬಾರಿಗೆ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿರುವ ಆನೆ.
ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಸಚಿವ ಸಾರಾ ಮಹೇಶ್, ಮಾಜಿ ಸಚಿವ ತನ್ವೀರ್ ಸೇಠ್ ಮತ್ತಿತರರು ಭಾಗಿಯಾಗಿದ್ದರು.ದೀಪ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಿದರು ಗಣ್ಯರು.