ದಿನದ ಸುದ್ದಿ

ಮೈಸೂರು ವಿ.ವಿ | ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಸಂಶೋಧನ ವಿದ್ಯಾರ್ಥಿಗೆ ಹಾಸ್ಟೆಲ್ ಸೌಲಭ್ಯ ಕೊಡದ ಕುಲಸಚಿವ

Published

on

ಸಂಶೋಧನ ವಿದ್ಯಾರ್ಥಿಗೆ ಹಾಸ್ಟೆಲ್ ಸೌಲಭ್ಯ ಕೊಡದ ಕುಲಸಚಿವ ಸ್ಟೂಡೆಂಟ್ ಅಸೋಸಿಯೇಷನ್ ಸಂಘಟನೆಯೊಂದನ್ನು ಕಟ್ಟಿಕೊಂಡು ಜಾಗೃತಿಗೊಳಿಸುತಿದ್ಧ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯನ್ನು ನಿಲಯದಿಂದ ಹೊರ ಹಾಕಲಾಗಿತ್ತು. ಇದರಿಂದ ದಿನಾಂಕ 17_05_2015 ರಂದು ಕೊಠಡಿಯಲ್ಲಿ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಅಂತದ್ದೇ ಪ್ರಕರಣವೊಂದು ಜರುಗುವ ಸಾಧ್ಯತೆಗಳಿವೆ.

ಹೈದ್ರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಸಂಘಟನೆ ಇರುವಂತೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಇದೆ. ಇದು ಸಂಘಟನೆಯು ನಿರಂತರವಾಗಿ 25 ವರ್ಷಗಳಿಂದಲೂ ಇದೆ. ಈ ಸಂಘಟನೆಯು ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ಲೋಪದೋಷಗಳನ್ನು ಪ್ರಶ್ನಿಸುವುದರ ಜೊತೆಗೆ ವಿದ್ಯಾರ್ಥಿಗಳಿಗಾಗುವ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಕೆಲಸ ಮಾಡುತ್ತಿದೆ. 2013 ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಎಂ. ಎ ಇತಿಹಾಸ ವಿಭಾಗಕ್ಕೆ ಪ್ರವೇಶಾತಿ ಪಡೆದ ಮಹೇಶ್ ಸೋಸ್ಲೆ Mahesh Sosle ಎಂಬ ವಿದ್ಯಾರ್ಥಿಯು ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷನಾಗಿದ್ದ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನಾನುಕೂಲ ಮತ್ತು ಇನ್ನಿತರ ಲೋಪದೋಷಗಳನ್ನು ಎತ್ತಿ ಹಿಡಿದಿದ್ದ.

ಎಂ. ಎ ಯಲ್ಲಿ ಚಿನ್ನದ ಪದಕ ಪಡೆದು ಹೊರಬಂದ ಈ ವಿದ್ಯಾರ್ಥಿಯು ಇಂದು ಅದೇ ಇತಿಹಾಸ ವಿಭಾಗದಲ್ಲಿ ಪಿಹೆಚ್, ಡಿ (ಸಂಶೋಧನೆ) ಗೆ ಪ್ರವೇಶ ಪಡೆದಿರುತ್ತಾನೆ. ಈ ವಿದ್ಯಾರ್ಥಿಗೆ ನಿಲಯ ಪ್ರವೇಶ ಕೊಟ್ಟರೆ ವಿಶ್ವವಿದ್ಯಾನಿಲದ ಲೋಪದೋಷಗಳನ್ನು ಎತ್ತಿ ಹಿಡಿಯುತ್ತಾನೆ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸುತ್ತಾನೆ ಎನ್ನುವ ನೆಪವೋಡ್ಡಿ ವಿಶ್ವವಿದ್ಯಾನಿಲಯದ ಸದರಿ ಕುಲಸಚಿವರು ವಿದ್ಯಾರ್ಥಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಪಿಹೆಚ್, ಡಿ ಗೆ ಪ್ರವೇಶವಿದ್ದರೂ ನಿಲಯದ ಪ್ರವೇಶಾತಿ ಸಿಗದ ಈ ದಲಿತ ವಿದ್ಯಾರ್ಥಿಯು ನಿಲಯದ ಕಾರಿಡಾರ್ ನಲ್ಲಿ ಯೇ ಮಲಗುತಿದ್ದಾನೆ.

ಇಲ್ಲಿ ನನ್ನ ಪ್ರಶ್ನೆ ಎಂದರೆ ಒಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಕ್ಕೆ ಪ್ರವೇಶಾತಿ ಕೊಟ್ಟ ನಂತರ ನಿಲಯದ ಪ್ರವೇಶಾತಿಯನ್ನು ಬಯಸಿದರೆ ಕಡ್ಡಾಯವಾಗಿ ಕೊಡಬೇಕು. ಪಿಹೆಚ್, ಡಿ ಗೆ ಪ್ರವೇಶಕೊಟ್ಟು ನಿಲಯಕ್ಕೆ ಪ್ರವೇಶಕೊಡದೆ ಯಾವ ಕಾನೂನಿನಡಿ ಕಪ್ಪು ಪಟ್ಟಿಯಲ್ಲಿ ಸೇರಿಸಿದ್ದೀರಿ? ಸಂಘಟನೆ ಮಾಡುವ ವ್ಯಕ್ತಿಗಳನ್ನು ಕಪ್ಪು ಪಟ್ಟಿಯಲ್ಲಿಡಬೇಕು ಎಂದು ರಾಜ್ಯಸರ್ಕಾರದ ಶೈಕ್ಷಣಿಕ ನಿಯಮಾವಳಿಯಾಗಲಿ, ವಿಶ್ವವಿದ್ಯಾನಿಲಯದ ನಿಯಮಾವಳಿಯಾಗಲಿ, ಯುಜಿಸಿ ನಿಯಮಾವಳಿಯಾಗಲಿ ಹೇಳುತ್ತದೆಯೇ? ಕರ್ನಾಟಕ ರಾಜ್ಯ ಸರ್ಕಾರ ಇದನ್ನು ಕೂಡಲೇ ಗಮನಿಸಿ ಕುಲಸಚಿವರ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿಗೆ ನ್ಯಾಯ ದೊರಕಿಸಿ. ಇಲ್ಲವಾದರೆ ಹೈದ್ರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಆತ್ಮಹತ್ಯೆಯ ಭಾಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದರೂ ಅಚ್ಚರಿಯಿಲ್ಲ. ಮುಂದೆ ಅದರ ಹೊಣೆಯನ್ನು ಸರ್ಕಾರವೇ ಹೋರಬೇಕಾಗುತ್ತದೆ.

(ಮಾಹಿತಿ ಕೃಪೆ:
– ಹಾರೋಹಳ್ಳಿ ರವೀಂದ್ರ)

Trending

Exit mobile version