ದಿನದ ಸುದ್ದಿ

ಪ್ರಾಣಿ ಪ್ರಿಯರಿಂದ ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

Published

on

ಸುದ್ದಿದಿನ,ಮೈಸೂರು : ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಮೈಸೂರಿನ ಎಂ.ಯಶೋಧಮ್ಮ ಅವರು 25,000 ರೂ. ಪಾವತಿಸಿ ಗೋಲ್ಡನ್ ಜಕಲ್ ಮತ್ತು ನಾಲ್ಕು ಕೊಂಬಿನ ಜಿಂಕೆ, ಎಂ. ನಂಜುಂಡ ಸ್ವಾಮಿ ಅವರು 3,500 ರೂ. ಪಾವತಿಸಿ ಬಿಳಿ ನವಿಲು ಹಾಗೂ ಬೆಂಗಳೂರಿನ ವಸಂತ್ ರಾಜ್ ರಾಜಣ್ಣ ಎಂಬುವವರು 5 ಸಾವಿರ ರೂ. ಪಾವತಿಸಿ ಗ್ರೇಟ್ ಇಂಡಿಯನ್ ಹಾನ್ರ್ಬಲ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.

ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version