ಲೈಫ್ ಸ್ಟೈಲ್
ಉಗುರ ಮೇಲಿನ ನೈಲ್ ಆರ್ಟ್ ತಿಂದು, ಕುಡಿಯಲು ಬಹುದು..!
ಈಗ ನಿಮ್ಮ ಕೈ ಉಗುರುಗಳ ಮೇಲಿನ ನೈಲ್ ಆರ್ಟ್ ನೀವು ತಿನ್ನಲೂ ಬಹುದು..ಕುಡಿಯಲೂ ಬಹುದು! ಶಾಕ್ ಆದ್ರಾ.. ಈ ಸ್ಟೋರಿ ಓದಿ..
ಕೈಯ ಉಗುರಿಗೆ ಬಣ್ಣ ಹಚ್ಚಿಕೊಳ್ಳೋದು ಮಾಮೂಲು. ಉಡುಪಿಗೆ ಮ್ಯಾಚಿಂಗ್ ಬಣ್ಣ ಹಚ್ಚಿಕೂಳ್ಳೋದು ಸ್ಟೈಲ್. ನೈಲ್ ಆರ್ಟ್ ಲೋಕದಲ್ಲಿ ವಿನೂತನ ಶೈಲಿಯ ಹೊಸಾ ನೈಲ್ ಆರ್ಟ್ ತಲೆ ಎತ್ತಿದೆ. ಮಳೆಗಾಲಕ್ಕೆ ನೈಲ್ ಆರ್ಟ್, ಸಮ್ಮರ್ ನೈಲ್ ಆರ್ಟ್, ಫ್ಲೋರಲ್ ಪ್ರಿಂಟ್ ನೈಲ್ಸ್, ಅನಿಮಲ್ ಪ್ರಿಂಟ್ ನೈಲ್ಸ್ ಮಹಿಳೆಯರಿಗೂ ಕಲೆಗೂ ಅವಿನಾಭಾವ ಸಂಬಂಧ. ಕಲೆಯ ಪ್ರತೀಕವಾಗಿರುವ ಹೆಣ್ಣು ತನ್ನ ಕಲೆಯನ್ನು ಕೈ ಉಗುರುಗಳ ಮೇಲೆ ತೋರಿಸುತ್ತಿದ್ದಾಳೆ.
ಕೈ ಉಗುರುಗಳ ಮೇಲೆ ಗುಲಾಬಿ ಅರಳಿಸಿರುವ ನೈಲ್ ಆರ್ಟ್ ಸ್ಪೆಷಲಿಸ್ಟಗಳು ಈಗ ಕೈ ಉಗುರುಗಳ ಮೇಲೆ ಜೋಳದ ಕಾಲು.. ಕಾಫಿ ಕಪ್ ಗಳನ್ನು ಬಹಳ ರಚನಾತ್ಮಕವಾಗಿ ನೈಲ್ ಆರ್ಟ್ ಆಗಿಸಿದ್ದಾರೆ.
ಕೈ ಉಗುರಿನ ಮೇಲೆ ಕ್ಯಾಂಡೀ, ಚಾಕಲೇಟ್, ಜೊಳದ ಕಾಳು, ಅಂಟಿಸಿಕೊಳ್ಳುವ ಫ್ಯಾಷನ್ ಟ್ರೆಂಡ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ದಲ್ಲಿ ಈಗ ಇದರದೇ ಸುದ್ದಿ. ಮಹಿಳೆ ಒಬ್ಬರು ತಮ್ಮ ಕೈ ಉಗುರಿನ ಮೇಲೆ ಮಿನಿಯೇಚರ್ ಸ್ಟಾರ್ ಬಕ್ಸ್ಬಾಕ್ಸ್ ಕಾಫಿ ಕಪ್ ನಿರ್ಮಿಸಿ ಅದಕ್ಕೆ ಸ್ಟ್ರಾ ಬಳಸಿ ಸೇವಿಸುವ ಫೋಟೋ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿದೆ.