ದಿನದ ಸುದ್ದಿ

ಈ ಎಲ್ಲ ಮಾಹಿತಿ ಇದ್ದು ಕೂಡ ಚುನಾವಣೆ ನಿಲ್ಲುವ ಅವಶ್ಯಕತೆ ಇತ್ತೆ..?

Published

on

  • ಬಿಂದು ಗೌಡ, ಕಾಂಗ್ರೆಸ್ ವಕ್ತಾರೆ

ರಾಹುಲ್ ಗಾಂಧಿ ಅವರೇ ಹೇಳಿರುವ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಇರುವ ಯಾರು ಕೂಡ ರಾಜಕೀಯ ಪ್ರವೇಶ ಮಾಡಬೇಡಿ ಅಂತ ಮತ್ತೊಂದು ಕಡೆ ಇನ್ನೊಂದು ಫೋಟೋ ನಲ್ಲಿ ಇರುವಂತಹ ಲಿಸ್ಟ್ ಚುನಾವಣೆ ಸ್ಪರ್ಧೆ ಯಾರು ಅರ್ಹರು ಎಂದು ಈಗಾಗಲೇ ಬಿಡುಗಡೆ ಆಗಿದ್ದ ಪಟ್ಟಿಯಲ್ಲಿ ನಲಪಾಡ್ ಅವರ ಹೆಸರು ಸ್ಟಾರ್ ಗುರುತು ಆಗಿದೆ ಅಂದ್ರೆ ಅವರು ಚುನಾವಣೆ ಸ್ಪರ್ಧೆಗೆ ಅರ್ಹರಲ್ಲ ಹಾಗಿದ್ದೂ ಚುನಾವಣೆ ಭಾಗವಹಿಸಿದ್ದೆ ಅದಲ್ಲಿ ಭಾಗವಹಿಸಿ ಗೆದ್ದರು ಸಹ ಅವರ ಗೆಲುವನ್ನು ಊರ್ಜಿತಗೊಳಿಸಲು ಸಾಧ್ಯವಿಲ್ಲ ಎಂದು ಈ ಮೊದಲೇ ಪಕ್ಷ ( Foundation for Advanced Management of Election (FAME) )ನೇರವಾಗಿ ಸುತ್ತೋಲೆ ಹೊರಡಿಸಿದೆ.

ಈ ಎಲ್ಲ ಮಾಹಿತಿ ಇದ್ದು ಕೂಡ ಚುನಾವಣೆ ನಿಲ್ಲುವ ಅವಶ್ಯಕತೆ ಇತ್ತೆ?

ಹಾಗೆ ಕೆಲವೊಂದಷ್ಟು ಜನ ಅಲ್ಪ ಸಂಖ್ಯಾತರಿಗೆ ಅನ್ಯಾಯ ಆಗಿದೆ ಅಂತ ಹೇಳ್ತಾ ಇದ್ದಾರೆ ಕಾಂಗ್ರೆಸ್ ಅನ್ನೋದು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಅಂಟಿಕೊಂಡಿರುವ ಪಕ್ಷ ಅಲ್ಲ ಇದೊಂದು ಜ್ಯಾತ್ಯಾತೀತ ಪಕ್ಷ ಇಲ್ಲಿ ಎಲ್ಲ ಜಾತಿ , ಧರ್ಮ ಪಂಗಡಗಳ ಶ್ರಮ ಇದೆ ಅದರಲ್ಲೂ ಯೂತ್ ಕಾಂಗ್ರೆಸ್ ಎಂಬುವುದಕ್ಕೆ ಜಾತಿಯ ಧರ್ಮದ ಆಧಾರದ ಮೇಲೆ ಅಧಿಕಾರ ಕೊಡುವುದು ಸೂಕ್ತ ಅಲ್ಲ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ , ofcourse ನಲಪಾಡ್ ಪಕ್ಷಕ್ಕೆ ದುಡಿದಿರಬಹುದು , ಅವರ ಶ್ರಮವೂ ಇರಬಹುದು ಆದ್ರೆ rule is a rule even for a fool ಅನ್ನುವ ಹಾಗೆ rule follow ಮಾಡಲೇಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದ್ದುದರಿಂದ ಹಾಗೂ ಕೆಲವೇ ಮತಗಳ ಅಂತರದಲ್ಲಿ ಅರ್ಹತೆ ಇರುವ ರಕ್ಷಾ ರಾಮಯ್ಯ ಅವರನ್ನ ಅಧ್ಯಕ್ಷರನ್ನಾಗಿ ಪಕ್ಷ ನಿರ್ಧರಿಸಿದೆ.

ಪಕ್ಷವನ್ನು ಅಭಿಮಾನಿಸುವ ಪ್ರೀತಿಸುವ ನಾವು ನೀವು ಎಲ್ಲರೂ ಪಕ್ಷದ ತೀರ್ಮಾನದ ಜೊತೆಗೆ ಪಕ್ಷದ ನೀತಿ ನಿಯಮಗಳನ್ನು ಗೌರವಿಸಿ , ಸ್ವಾಗತಿಸಿ ಪಾಲಿಸಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version