ದಿನದ ಸುದ್ದಿ

ನರೇಗಾಗೆ ಹೆಚ್ಚುವರಿ 40 ಸಾವಿರ ಕೋಟಿ ನೀಡಲಾಗುವುದು : ಸಚಿವೆ ನಿರ್ಮಲಾ ಸೀತಾರಾಮನ್

Published

on

ಸುದ್ದಿದಿನ,ನವದೆಹಲಿ: ಕೊರೊನಾ ಉಂಟು ಮಾಡಿದ ಆರ್ಥಿಕ ಸಂಕಷ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು 5ನೇ ಹಂತದ ಪ್ಯಾಕೇಜ್ ಘೋಷಿಸಿದೆ. ಈ ಪೈಕಿ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿತ್ತ ಸಚಿವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಕಿಸಾನ್ ಸಮ್ಮಾನ್ ಯೋಜನೆ, ಜನ್‍ಧನ್ ಖಾತೆಗಳಿಗೆ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖ್ಯಾಂಶಗಳು ಹೀಗಿವೆ

  • ಉದ್ಯೋಗ ಉತ್ತೇಜನ ನೀಡಲು ಸರ್ಕಾರ ಈಗ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ.ಗಳನ್ನು ನೀಡಲಿದೆ.
  • ಇದು ಒಟ್ಟು ಸುಮಾರು 300 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲು ಇದು ಸಹಾಯಕವಾಗಿದೆ.
  • ಇದು ಹೆಚ್ಚಿನ ಕೆಲಸಕ್ಕಾಗಿ ಮಾನ್ಸೂನ್ ಋತುವಿನಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರನ್ನು ಒಳಗೊಂಡಿದೆ.
  • ನೀರಿನ ಸಂರಕ್ಷಣಾ ಕಾಮಗಾರಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬಾಳಿಕೆ ಬರುವ ಮತ್ತು ಜೀವನೋಪಾಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು.
  • ಇದು ಹೆಚ್ಚಿನ ಉತ್ಪಾದನೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version