ರಾಜಕೀಯ
ಮೋದಿ ಭ್ರಷ್ಟನಲ್ಲ ಎಂಬ ಮಿಥ್ಯೆ : ಅದಾನಿ, ಮೋದಿ ಎಂಬ ಅವಳಿ-ಜವಳಿ ದರೋಡೆಗಾರರು
ಗುಜರಾತ್ ಸರ್ಕಾರಕ್ಕೆ ಅದಾನಿ ಬಿಟ್ಟರೆ ಬೇರೆ ಯಾರೂ ಕಾಣುವುದಿಲ್ಲವೇ ? ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಬಹಿರಂಗ ಕೋರ್ಟ್‌ನಲ್ಲಿ ಕೇಳಿದ ಪ್ರಶ್ನೆ, ಮೋದಿ ಮುಖ್ಯ ಮಂತ್ರಿಯಾಗಿ, ಹಲವು ಸಾವಿರ ಎಕರೆ ಕಡಲ ತೀರವನ್ನು ಎಕರೆಗೆ ಒಂದು ರೂನಂತೆ ಅದಾನಿಗೆ ಕೊಟ್ಟಾಗ, ಗುಜರಾತ್‌ನ ಬಂದರುಗಳನ್ನೂ ಅದಾನಿಗೆ ಕೊಡಲಾಯಿತು.ವಿದ್ಯುತ್ ತಯಾರಿಕೆಯನ್ನೂ.. ಇನ್ನೂ ಎಷ್ಟೆಷ್ಟೋ.
ಅಷ್ಟು ಸಾಲದೆಂದು ಕರ್ನಾಟಕದಲ್ಲಿ ಯಡ್ಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮೂಲಕ ಅದಾನಿಗೆ ಗಣಿ ದರೋಡೆ ಮಾಡಲು ಅವಕಾಶ.ಕಾರವಾರದ ಬಳಿಯ ಬೆಳ್ಳಿಕೇರಿ ಬಂದರಿನಲ್ಲಿ ಲೋಕಾಯುಕ್ತ ಸಂತೋಷ ಹೆಗ್ಡೆಯವರು ವಶಪಡಿಸಿಕೊಂಡಿದ್ದ ಹಲವು ಲಕ್ಷಾಂತರ ಟನ್ ಕಬ್ಬಿಣದ ಅದಿರು ರಾತ್ರೋರಾತ್ರೆ ಮಾಯವಾದ ಅತ್ಯಂತ ಗೂಂಡಾಗಿರಿಯ ಪ್ರಸಂಗದಲ್ಲಿ ಅದಾನಿಯದೇ ಅತ್ಯಂತ ದೊಡ್ಡ ಪಾಲು. ಜನಾರ್ದನ ರೆಡ್ಡಿ ಜೈಲಿಗೆ ಹೋದ.
ಅದಾನಿಗೆ ಮೋದಿ ರಕ್ಷಣೆ. ಪ್ರಧಾನಿಯಾದ ಕೂಡಲೆ ಅದಾನಿಯ ಭ್ರಷ್ಟತನಕ್ಕೆ ರೆಕ್ಕೆ ಬಂದು ವಿಶ್ವವ್ಯಾಪಿಯಾಯಿತು. ವರ್ಷಗಟ್ಟಲೆ ತೊಗರಿ ಬೇಳೆಯ ಬೆಲೆ 180 ಕ್ಕೆ ಏರಿದ್ದು ಅದಾನಿಗೆ ಮೋದಿ ತೊಗರಿ ಆಮದಿನ , ಬಂದರುಗಳಲ್ಲಿ ದಾಸ್ತಾನು ಮಾಡುವ ಗುತ್ತಿಗೆ ನೀಡಿದುದರಿಂದ. ಇಡೀ ಭಾರತದ ಜನರಿಂದ ಕಸಿದ ಹಣ ಹಲವು ಹತ್ತು ಸಾವಿರ ಕೋಟಿ ಮೀರುತ್ತದೆ.
ಮೋದಿಯ ಪಾಕಿಸ್ತಾನ,ಬಂಗ್ಲಾದೇಶ, ಆಸ್ಟ್ರೇಲಿಯಾ ಮೊದಲಾದ ಹಲವು ದೇಶಗಳ ಭೇಟಿಯಲ್ಲಿ ಸಹಿ ಮಾಡಿದ 15ಕ್ಕೂ ಹೆಚ್ವು ಬೃಹತ್ ಗಾತ್ರದ ಒಪ್ಪಂದಗಳು ಅದಾನಿಗಾಗಿ..
ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಒಪ್ಪಂದಕ್ಕೆ ಮೋದಿ ಸಹಿ ಹಾಕಿ ಒಂದೇ ಬಾರಿಗೆ 15, ೦೦೦ ಕೋಟಿ ಸಾಲ SBI ನಿಂದ ಕೊಡಿಸಿದ್ದು ಒಂದು ಉದಾಹರಣೆ. ಭಾರತದಲ್ಲಿ ನೂರಾರು ಸರ್ಕಾರಿ ಆಜ್ಞೆಗಳು, ತೆರಿಗೆ ರಿಯಾಯಿತಿಗಳು , ಪರಿಸರ ಸಂರಕ್ಷಣೆ ಕಾಯಿದೆ , ಗಣಿ ಕಾಯಿದೆ , ಅರಣ್ಯ ಕಾಯಿದೆ ಆಜ್ಞೆಗಳ ಉಲ್ಲಂಘನೆಗಳು ಈ ಐದು ವರ್ಷಗಳಲ್ಲಿ. ಕೇವಲ ಮೋದಿ ಅಧಿಕಾರದ ಕೊನೆಯ ತಿಂಗಳಿನಲ್ಲಿ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ರಂಗದ ಉದ್ಯಮಗಳನ್ನು ತುಳಿದು ವಿಮಾನ ನಿಲ್ದಾಣ ನಿರ್ಮಾಣ, ನಿರ್ವಹಣೆಯ ಯಾವುದೇ ಅನುಭವವಿಲ್ಲದಿದ್ದರೂ ಆರು ವಿಮಾನ ನಿಲ್ದಾಣಗಳ ಗುತ್ತಿಗೆ. 4.3 ಲಕ್ಷ ಎಕರೆ ಚತ್ತಿಸಘಡದ ದಟ್ಟ ಅರಣ್ಯದ ಗುತ್ತಿಗೆ.
ಎನರ್ಜಿ ಎಸ್.ಇ.ಝಡ್ ಹೆಸರಿನಲ್ಲಿ ಮೂರು ಸಾವಿರ ಕೋಟಿಗೂ ಮಿಗಿಲು ತೆರಿಗೆ ವಿನಾಯಿತಿ. ಹೀಗೆ ಒಂದೇ ಒಂದು ಕುಟುಂಬಕ್ಕೆ ಒಂದಲ್ಲ ಎರಡಲ್ಲ ಲಕ್ಷಾಂತರ ಕೋಟಿ ರೂ ಬೆಲೆಯ ದೇಶದ ಭೂಮಿ, ಅರಣ್ಯ, ಬಂದರು, ವಿಮಾನ ನಿಲ್ದಾಣ , ವಿದ್ಯುತ್, ಕಲ್ಲಿದ್ದಲು ಸಂಪನ್ಮೂಲದ ಚಿನ್ನದ ಮಳೆ ಸುರಿಸಲಾಗಿದೆ.
ಏಕೆ ? ಏಕೆ ?? ಏಕೆ ???
– ಜಿ.ಎನ್. ನಾಗರಾಜ್