ಸಿನಿ ಸುದ್ದಿ

ದಾವಣಗೆರೆ, ಚಿತ್ರದುರ್ಗದಲ್ಲಿ ‘ನಟಸಾರ್ವಭೌಮ’ನಿಗೆ ಭರ್ಜರಿ ಓಪನಿಂಗ್..!

Published

on

ಸುದ್ದಿದಿನ,ದಾವಣಗೆರೆ : ಬಹುನಿರೀಕ್ಷಿತ ಸಿನೆಮಾ ಪವರ್ ಸ್ಟಾರ್ ಪುನಿತ್ ಅಭಿನಯದ ನಟ ಸಾರ್ವಭೌಮ ಚಲನಚಿತ್ರ, ರಾತ್ರಿ 12:45 ಕ್ಕೆ ಬಿಡುಗಡೆಯಾಯಿತು. ನಗರದ ಗೀತಾಂಜಲಿ ಹಾಗೂ ತ್ರೀನೇತ್ರ ಥಿಯೇಟರ್ ನಲ್ಲಿ ಸಿನೆಮಾ ತೆರೆಕಂಡಿದೆ.

ಗೀತಾಂಜಲಿ ಥಿಯೇಟರ್ ನಲ್ಲಿ ಕಿಕ್ಕಿರಿದ ಅಪ್ಪು ಅಭಿಮಾನಿಗಳ ಸಂಭ್ರಮ ಒಂದೆಡೆಯಾದರೆ ಥಿಯೇಟರ್ ತುಂಬೆಲ್ಲ ರಾರಾಜಿಸುತ್ತಿರುವ ಅಪ್ಪು ಬ್ಯಾನರ್ ಗಳು ರಾರಾಜಿಸುತ್ತಿವೆ.ಥಿಯೇಟರ್ ಮುಂದೆ ಪವರ್ ಸ್ಟಾರ್ ನ 30 ಅಡಿ ಕಟೌಟ್ ನಿರ್ಮಾಣ ಮಾಡಲಾಗಿದ್ದು, ಅಪ್ಪು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದರು ಅಭಿಮಾನಿಗಳು.

ಥಿಯೇಟರ್ ಮುಂದೆ ಅಪ್ಪು ಅಭಿಮಾನಿಗಳ ನೂಕುನುಗ್ಗಲು, ಪಟಾಕಿ ಸಿಡಿಸಿ ಅಪ್ಪು ಅಭಿಮಾನಿಗಳಿಂದ ಸಂಭ್ರಮ. ಗೀತಾಂಜಲಿ ಥಿಯೇಟರ್ ಹರಿದು ಬಂದಿದ್ದ ಅಪ್ಪು ಅಭಿಮಾನಿಗಳು.

ಚಿತ್ರದುರ್ಗ ದಲ್ಲಿ ಬೆಳಗ್ಗೆ 07:45 ಕ್ಕೆ ನಗರದ ಬಸವೇಶ್ವರ ಥಿಯೇಟರ್ ತೆರೆಕಂಡಿತು ನಟಸಾರ್ವಭೌಮ ಚಿತ್ರ. ಅಪ್ಪು ಅಭಿಮಾನಿಗಳಿಂದ ಪ್ರೇಕ್ಷಕರಿಗೆ ಬೆಳಗಿನ ಉಪಹಾರ ವಿತರಣೆಮಾಡಲಾಯಿತು.ಥಿಯೇಟರ್ ತುಂಬೆಲ್ಲ ಕಾಣಸಿಗುವ ಅಪ್ಪು ಬ್ಯಾನರ್ ಗಳೇ ತುಂಬಿದ್ದು,
ಥಿಯೇಟರ್ನಲ್ಲಿ ಪವರ್ ಸ್ಟಾರ್ ನ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ.ಪಟಾಕಿ ಸಿಡಿಸಿ ಅಪ್ಪು ಅಬಿಮಾನಿಗಳು ಸಂಭ್ರಮ ಇಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version