ದಿನದ ಸುದ್ದಿ
ಲಂಡನ್‌ನಲ್ಲಿ ಕಾಣಿಸಿಕೊಂಡ ವಂಚಕ ನೀರವ್ ಮೋದಿ..!
ಸುದ್ದಿದಿನ, ಲಂಡನ್: 13,700 ಕೋಟಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿ ನೀರವ್ ಮೋದಿ ಸದ್ಯ ಲಂಡನ್‌ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾನೆ. ಲಂಡನ್ ನಗರದ ಬೀದಿಯಲ್ಲಿ ನೀರವ್ ಮೋದಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಲಂಡನ್‌ನಲ್ಲೇ ಹೊಸ ವಜ್ರೋದ್ಯಮವನ್ನು ಶುರು ಮಾಡಿದ್ದಾನೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ನೀರವ್ ಮೋದಿ ಸೆಂಟ್ರಲ್ ಲಂಡನ್‌ನ ‘chic street’ನಲ್ಲಿ ಮೂರು ಬೆಡ್ ರೂಂವುಳ್ಳ ಫ್ಲ್ಯಾಟ್‌ನಲ್ಲಿ ವಾಸವಿದ್ದು, ಈ ಮನೆಯ ಬಾಡಿಗೆ ತಿಂಗಳಿಗೆ 17,000 ಡಾಲರ್(ಅಂದಾಜು 11.8 ಲಕ್ಷ) ಎಂದು ಹೇಳಲಾಗಿದೆ. ನೀರವ್ ಮೋದಿ ಲಂಡನ್ ರಸ್ತೆಗಳಲ್ಲಿ ಓಡಾಡುತ್ತಿರುವ 2 ನಿಮಿಷದ ವಿಡಿಯೋವನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಈ ವೇಳೆ ಲಂಡನ್‌ನಲ್ಲಿ ರಾಜಕೀಯ ಆಶ್ರಯ ಕೋರಿದ್ದೀರಾ? ಎಂಬ ಪ್ರಶ್ನೆಗೆ ನೀರವ್ ಮೋದಿ ಉತ್ತರ ನೀಡಲು ನಿರಾಕರಿಸಿದ್ದಾನೆ. ಇನ್ನು ವಿಡಿಯೋದಲ್ಲಿ ಆತ ಕಪ್ಪು ಬಣ್ಣದ ಜಾಕೆಟ್ ಧರಿಸಿರೋದು ಕಾಣುತ್ತದೆ. ಈ ಜಾಕೆಟ್ ಸುಮಾರು 10 ಲಕ್ಷ ರೂ. ಮೌಲ್ಯದ್ದು ಎನ್ನಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401