ದಿನದ ಸುದ್ದಿ
ನೀಟ್ ಪರೀಕ್ಷೆ ಮುಂದೂಡಿಲ್ಲ ; ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ
ಸುದ್ದಿದಿನ ಡೆಸ್ಕ್ : ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯನ್ನು ಮುಂದೂಡಿಲ್ಲ. ಪರೀಕ್ಷೆ ನಿಗದಿಯಾಗಿರುವಂತೆ ಇದೇ ತಿಂಗಳ 21ರಂದು ನಡೆಯಲಿದೆ ಎಂದು ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದೆ.
ನೀಟ್ ಸ್ನಾತಕೋತ್ತರ ಪರೀಕ್ಷೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ ಎಂಬುವುದಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಸುಳ್ಳು ಮಾಹಿತಿಯ ಬಗ್ಗೆ ಎಚ್ಚರವಹಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ ತಿಳಿಸಿದೆ.
ಮಂಡಳಿ ನಡೆಸುವ ವಿವಿಧ ಪರೀಕ್ಷೆಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು natboard.edu.in ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪಿಐಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243