ದಿನದ ಸುದ್ದಿ

ಪರಿಶಿಷ್ಟ ಜಾತಿ ಯುವಜನರಿಗೆ ‘ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ’ : ಅರ್ಜಿ ಆಹ್ವಾನ

Published

on

ಸುದ್ದಿದಿನ, ಬೆಂಗಳೂರು : 2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯುವಜನರಿಗೆ ಪೂರಕವಾದ ಉದ್ಯೋಗಗಳ ವಿಫುಲ ಅವಕಾಶಗಳಿದ್ದು, ಅದರಂತೆ ಪರಿಶಿಷ್ಟ ಜಾತಿ ಯುವಜನರಿಗೆ ಕೆಳಕಂಡ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ 2023-24ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ತರಬೇತಿ ಶಿಬಿರವನ್ನು ಇಲಾಖೆ ವತಿಯಿಂದ ನೀಡಲಾಗುವುದು.


ತರಬೇತಿ ಶಿಬಿರ : ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ (8 ದಿನಗಳು)

ದಿನಾಂಕ : 31-01-2024 ರಿಂದ 07-02-2024 ರವರೆಗೆ

ವಿದ್ಯಾರ್ಹತೆ : ಪದವಿ ಹಾಗೂ ಜರ್ನಲಿಸಂಗೆ ಪ್ರಾಮುಖ್ಯತೆ

ವಯೋಮಿತಿ : 15 ರಿಂದ 29 ವರ್ಷ


ಯುವಜನರನ್ನು ಸ್ವಾವಲಂಭಿಯಾಗಲು ಉತ್ತೇಜಿಸುವ ದೃಷ್ಟಿಯಿಂದ (ಹೊರ ಜಿಲ್ಲೆಗಳ ಆಸಕ್ತ ಯುವಜನರಿಗೆ ವಸತಿ ಸಹಿತ) ಮೇಲ್ಕಂಡ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಈ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

ಅದರಂತೆ ಸಂಬಂಧಪಟ್ಟ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಸ್ಥಳೀಯವಾಗಿ ಪ್ರಚಲಿತವಿರುವ ದಿನಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರವನ್ನು ನೀಡಿ ಅಸಕ್ತ ಯುವಜನರಿಂದ ಅರ್ಜಿಗಳನ್ನು ಪಡೆದು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.


ಮುಂದುವರೆದು ಮೊದಲನೇ ತರಬೇತಿ ಶಿಬಿರದಲ್ಲಿ 50 ಶಿಬಿರಾರ್ಥಿಗಳಿಗೆ ಸೀಮಿತಗೊಳಿಸಬೇಕಾಗಿರುವುದರಿಂದ ಸಂಬಂಧಪಟ್ಟ ಉಪ/ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು 27-01-2024 ರೊಳಗೆ ಕೇಂದ್ರ ಕಚೇರಿಯ ಮೂಲಕ ಈ ಮೇಲ್ (tspscp@gmail.com) ಹಾಗೂ ಅಂಚೆ ಮೂಲಕ ಕಳುಹಿಸಲು ಸೂಚಿಸಿದೆ. ತದನಂತರ ಬಂದಿರುವ ಅರ್ಜಿಗಳನ್ನು ಶಿಬಿರದಲ್ಲಿ ಪರಿಗಣಿಸಲು ಅವಕಾಶವಿರುವುದಿಲ್ಲ. ತರಬೇತಿ ಶಿಬಿರದಲ್ಲಿ ಭಾಗವಹಿಸುವ
ಶಿಬಿರಾರ್ಥಿಗಳ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸ ಬೇಕು.


ಶಿಬಿರದಲ್ಲಿ ಹಾಜರಾಗುವ ಯುವಜನರಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವಜನರಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version