ದಿನದ ಸುದ್ದಿ

ನಿಫಾ ವೈರಸ್ ರಹಸ್ಯ ಬಯಲು..!

Published

on

ಸುದ್ದಿದಿನ ಡೆಸ್ಕ್ : ದೇಶಾದ್ಯಂತ ಹೆಮ್ಮಾರಿಯಂತೆ ಕಾಡಿದ್ದ ಕೇರಳದ ನಿಫಾ ವೈರಸ್ ಎಲ್ಲಿಂದ ಹರಡಿತ್ತು ಎಂಬ ರಹಸ್ಯ ಬಹಿರಂಗವಾಗಿದ್ದು, ಇದಕ್ಕಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆ 51 ಬಾವಲಿಗಳನ್ನು ಪರೀಕ್ಷೆಗೊಳಪಡಿಸಿ ಮೂಲ ಪತ್ತೆ ಹಚ್ಚಿದೆ.

ಕೇರಳದ ಕೊಜಿಕೋಡಿನ ಪೆಟೊಪಸ್ ಗಿಗಾಂಟೀಯಸ್ ಹೆಸರಿನ 51 ಬಾವಲಿಗಳನ್ನು ಕೊಜಿಕೋಡು ಎನ್ಐವಿ ಕೇಂದ್ರದ ಅಧಿಕಾರಿಗಳ ತಂಡ ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ 11 ಬಾವಲಿಗಳಲ್ಲಿ ನಿಫಾ ವೈರಸಿನ ಅನುವಂಶೀಯ ಗುಣಗಳನ್ನು ಹೊಂದಿರುವುದು ದೃಢಪಟ್ಟಿದೆ.

ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಪರೀಕ್ಷೆಯಿಂದ ಈ ವೈರಸ್ ಇರುವುದು ದೃಢವಾಗಿದೆ. ರೋಗಿಗಳಲ್ಲಿ ಶೇ. 99.68 ನಷ್ಟು ಹೋಲುವ ವೈರಸ್ ಕಂಡುಬಂದಿದೆ. ಈ ಆಂಶ ಗಮಿಸಿದಾಗ ಬಾವಲಿಗಳು ವೈರಸ್‌ ನ ವಾಹಕಗಳಾಗಿವೆ ಎಂಬುದು ಖಚಿತವಾದಂತಾಗಿದೆ ಎಂದು ‘ದಿ ಹಿಂದು’ ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಆದರೆ, ಬಾವಲಿಗಳಿಂದ ಮನುಷ್ಯನಿಗೆ ಈ ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿಲ್ಲ. ಮುಂದಿನ ಅನಾಹುತಗಳನ್ನು ತಪ್ಪಿಸಲು ಈ ಕಾರ್ಯ ಅನಿವಾರ್ಯವಾಗಿದೆ ಎಂದು ನ್ಯೂಯಾರ್ಕ್ ನ ಎಕೋಹೆಲ್ತ್ ಅಲೈಯನ್ಸ್ ಸೋಂಕುಶಾಸ್ತ್ರಜ್ಞ ಜೋನಾಥನ್ ಎಪ್ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ, ಬಾಂಗ್ಲಾ ದೇಶದಲ್ಲಿ ನಿಫಾ ಸಂಬಂಧಿತ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅಲ್ಲಿನ ಜನರು ತಾಳೆ ಮರದ ಹಣ್ಣಿನ ರಸ (raw date-palm sap) ಸೇವನೆ ಮಾಡುತ್ತಿದ್ದರಿಂದ ಈ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆದರೆ, ಕೇರಳದಲ್ಲಿ ಜನರು ಈ ಹಣ್ಣಿನ ರಸ ಸೇವನೆ ಮಾಡುವುದಿಲ್ಲ. ಆದರೂ ಈ ಸೋಂಕು ಹೇಗೆ ಹರಡಿದೆ ಎಂಬುದು ತಿಳಿಯುವ ಅಗತ್ಯವಿದೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version