ದಿನದ ಸುದ್ದಿ

ವಿಡಿಯೋ | ಇಂಡೋನೇಷ್ಯಾದಲ್ಲೂ ‘ ನಿಖಿಲ್‌ ಎಲ್ಲಿದಿಯಪ್ಪಾ’ ಹವಾ..!

Published

on

ಸುದ್ದಿದಿನ ಡೆಸ್ಕ್ : ರಾಜ್ಯದ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದರ ಹಿನ್ನೆಲೆಯಲ್ಲಿ ಜಿಡಿಎಸ್, ಕಾಂಗ್ರಸ್ ಕಾರ್ಯಕರ್ತರಲ್ಲೇ ಭಿನ್ನಾಭಿಪ್ರಾಯಗಳು ಭುಗಿಲೆದ್ದವು.

ಕಾಂಗ್ರೆಸ್ ಮುಖಂಡರ ಜೊತೆ ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸುವ ಇಂಗಿತವನ್ನ ಅಂಬರೀಶ್ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರ ಮುಂದಿಟ್ಟಿದ್ದರು. ಆದರೆ ಆಗಲೇ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯದಿಂದ ಕಣಕ್ಕಿಳಿಸುವ ವಿಚಾರವಾಗಿ ಚರ್ಚಿಸಿ ನಿಖಿಲ್ ರನ್ನು ಪೈನಲ್ ಮಾಡಲಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಅಭಿನಯಿಸಿದ ‘ಜಾಗ್ವಾರ್’ ಸಿನೆಮಾದ ಆಡಿಯೋ ಬಿಡುಗಡೆಯನ್ನ ಮಂಡ್ಯ ಕೆಲವು ವರ್ಷ ಗಳ ಹಿಂದೆ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ‌ ನಿಖಿಲ್ ಹಾಗೂ ಕುಮಾರಸ್ವಾಮಿ ನಡುವಿನ ಮಾತಿನ ದೃಶ್ಯದ ತುಣುಕುಗಳನ್ನು ಟ್ರೋಲ್ ಪೇಜ್ ಗಳು ಬಳಸಿಕೊಂಡು ವ್ಯಂಗವಾಡತೊಡಗಿದವು.

ಆದರೆ ಅದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಭಾರತದ ತುಂಬ, ಹಾಗೂ ವಿದೇಶಗಳಲ್ಲೂ ಈ ದೃಶ್ಯವನ್ನು ಟ್ರೋಲ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ‌ ಹರಿದಾಡುತ್ತಿವೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version