ದಿನದ ಸುದ್ದಿ
ತುದಿ ಬೆರಳಲ್ಲಿದೆ ನಿಮ್ಮ ಭವಿಷ್ಯ ; NOTA ನಿಮ್ಮ ಹಕ್ಕು
- ಮಲ್ಲಿಕಾರ್ಜುನ್. ಸಿ,ಎಂ.ಎ, ಪ್ರಥಮ ವರ್ಷದ ವಿದ್ಯಾರ್ಥಿ, ಪತ್ರಿಕೋದ್ಯಮದ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಹಾಗಾಗಿ ಹಲವಾರು ನಾನಾ ರಾಜಕೀಯ ಪಕ್ಷಗಳು ನಾ ಮುಂದು, ತಾ ಮುಂದು ಎಂಬುದು ಹಲವಾರು ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಮತ ಹಾಕಿ ನಮ್ಮ ಪಕ್ಷಕ್ಕೆ ಮತ ಹಾಕಿ ಎಂಬ ಕೂಗು ಎಲ್ಲೆಲ್ಲೂ ಕೇಳಿ ಬರುತ್ತಿದೆ.
ಭರವಸೆ, ಪ್ರಚಾರಗಳ ಭರಾಟೆ ಏನೂ ಕಡಿಮೆ ಇಲ್ಲ ಬಿಡಿ. ಈ ಸಮಯದಲ್ಲಿ ನಿರಂಜನರವರ ‘ತಿರುಕಣ್ಣನ ಮತದಾನ’ , ನೇಮಿಚಂದ್ರರ ‘ಆಯ್ಕೆ ಇದೆ ನಿಮ್ಮ ಕೈಯಲ್ಲಿ ‘ ಕಥೆಗಳು ನೆನಪಾಗದಿದ್ದರೆ ಹೇಗೆ? ಅದು ಬಿಡಿ ಪ್ರಪಂಚದಲ್ಲೇ ಹೆಚ್ಚು ಯುವ ಜನತೆಯಿರುವ ನಮ್ಮ ದೇಶದಲ್ಲಿ ನಾವು ಮತ ಹಾಕುವ ತುದಿ ಬೆರಳಿನಲ್ಲೇ ನಮ್ಮ ಭವಿಷ್ಯವಿದೆ ಎಂಬುದನ್ನ ಮರೆಯಬೇಡಿ.
ಸದ್ಯದ ಭಾರತದಲ್ಲಿ ಒಂದೆಡೆಯಾದರೆ ಕರ್ನಾಟಕದ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅದೆಷ್ಟೋ ಮಂದಿಗೆ ಚುನಾವಣೆಯ ಬಗ್ಗೆ ಹೆಚ್ಚು ಮಾಹಿತಿಯೂ ತಿಳಿದಿಲ್ಲ ಕೆಲವರ ಬಳಿ ಗುರುತಿನ ಚೀಟಿಯೂ ಇಲ್ಲ ಇನ್ನು ಕೆಲವರು ಚೀಟಿ ಇದ್ದರೂ ಮತ ಚಲಾಯಿಸುವುದೇ ಇಲ್ಲ. ನಮಗೆ ಸೂಕ್ತ, ಪ್ರಜಾಪ್ರಭುತ್ವಕ್ಕೆ ಹಿತ ಎನ್ನುವಂತಹ ಅಭ್ಯರ್ಥಿಗೆ ಮತ ಹಾಕಬೇಕು ಎನ್ನುವ ಕನಿಷ್ಠ ಜ್ಞಾನ ಇಂದಿನ ಜನತೆ ತಿಳಿಯಲೇಬೇಕು.
ಅದರಲ್ಲೂ ಯುವಜನತೆಯ ರಾಷ್ಟ್ರ ಮಟ್ಟದ ನಾಯಕರನ್ನು ಅಥವಾ ಪಕ್ಷವನ್ನು ಪರಿಗಣಿಸದೇ ನಿಮ್ಮ ಕ್ಷೇತ್ರದಲ್ಲಿ, ನಿಮಗೆ ಸರಿಯೆನಿಸುವ, ನ್ಯಾಯ ಎನಿಸುವ ಯಾವ ಪಕ್ಷದ ಅಭ್ಯರ್ಥಿಗಾದರೂ, ಸ್ವತಂತ್ರ ಅಭ್ಯರ್ಥಿಗಾದರೂ ಮತ ಹಾಕಿ. ಇನ್ನು ಒಂದು ಮುಖ್ಯ ವಿಚಾರ ನೆನಪಿನಲ್ಲಿಡಿ ಅದ್ಯಾವುದೇ ಅಭ್ಯರ್ಥಿ ನಿಮಗೆ ಸೂಕ್ತವಲ್ಲವೆನಿಸಿದರೂ ಅದಕ್ಕೆಂದೇ ಸುಪ್ರೀಂ ಕೋರ್ಟ್ 2013ರಿಂದ NOTA ಎಂಬ ಆಯ್ಕೆಯನ್ನು ನಮಗೆ ನೀಡಿದ್ದಾರೆ. ಈ ಒಂದು ಆಯ್ಕೆ ಇರುವುದರ ಬಗ್ಗೆ ಅದೆಷ್ಟೋ ಜನತೆಗೆ ಜಾಗೃತಿಯೇ ಇಲ್ಲ.
ಆಸೆ ಆಮಿಷಗಳಿಗೆ ಒಳಗಾಗದೇ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲಾ ಹಕ್ಕು, ಅಧಿಕಾರಗಳು ನಿಮಗೆ ಇದೆ. ಪರೀಕ್ಷೆ ಬರೆಯುವಾಗ ಮೇಲಿನ ಮೇಲಿನ ಮೂರೂ ಆಯ್ಕೆಗಳು ತಪ್ಪಾಗಿದ್ದಲ್ಲಿ ನೀವು ಹೇಗೆ ಕೊನೆಯ NOTA -(ಈ ಮೇಲಿನ ಯಾವುದೂ ಅಲ್ಲ) ಆಯ್ಕೆಯನ್ನ ಬರೆದು ಬರುತ್ತೀರೋ ಹಾಗೆಯೇ ಈ ಚುನಾವಣೆ ಪರೀಕ್ಷೆಯಲ್ಲಿಯೂ NOTA ಒತ್ತಿ ಅಭ್ಯರ್ಥಿಗಳನ್ನು ತ್ಯಜಿಸುವ, ದಿಕ್ಕರಿಸುವ ಹಕ್ಕು ನಿಮಗಿದೆ.
ಒಬ್ಬ ಜವಾಬ್ದಾರಿಯಾಗಿ ವರ್ತಿಸಿ ಮತ ಚಲಾಯಿಸಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳದ್ದೇ ಮುಖ್ಯ ಪಾತ್ರ ಎಂಬುದನ್ನು ಮರೆಯಬೇಡಿ ಕಾಲ ಮಿಂಚಿದ ಮೇಲೆ ಚಿಂತಿಸಿ ಫಲವಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243