ದಿನದ ಸುದ್ದಿ

ರಾಷ್ಟ್ರೀಯ ಯುವ ದಳದ ಸ್ವಯಂಸೇವಕರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದ ವತಿಯಿಂದ ದಾವಣಗೆರೆ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಇಬ್ಬರಂತೆ ಹಾಗೂ ದಾವಣಗೆರೆ ನಗರದ ನೆಹರು ಯುವ ಕೇಂದ್ರದ ಕಚೇರಿಗ ಇಬ್ಬರು(ಕಂಪ್ಯೂಟರ್ ಕೆಲಸ) ಸೇರಿದಂತೆ ಒಟ್ಟು 14 ಸಂಖ್ಯೆಯ ರಾಷ್ಟ್ರೀಯ ಯುವ ದಳದ ಸ್ವಯಂಸೇವಕರನ್ನು ಗೌರವ ಧನ ಆಧಾರದ ಮೇರೆಗೆ 1 ವರ್ಷದ ತಾತ್ಕಾಲಿಕ ಅವಧಿಗೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ(ಹತ್ತನೇ ತರಗತಿ) ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು( ವಿದ್ಯಾರ್ಥಿಗಳು ಅರ್ಜಿ ಹಾಕಲು ಅರ್ಹರಲ್ಲ). ದಿ:01.04.2021ಕ್ಕೆ 18 ವರ್ಷ ಆಗಿರಬೇಕು ಹಾಗು 29 ವರ್ಷದ ಒಳಗಿನವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.5000 ಗೌರವಧನ ನೀಡಲಾಗುವುದು ಹಾಗೂ ಶಿಸ್ತಿನಿಂದ ಕೂಡಿದ ಅರ್ಪಣಾ ಮನೋಭಾವ ಹೊಂದಿರಬೇಕು. ಈ ಯುವ ಸ್ವಯಂ ಸೇವಕರು ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವಕ/ಯುವತಿ/ಮಹಿಳಾ ಮಂಡಳಿ ರಚನೆ, ಯುವ ಕಾರ್ಯಕ್ರಮಗಳು ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸವಿರುತ್ತದೆ.

ಇಚ್ಚೆಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು
www.nyks.nic.in ವೆಬ್‍ಸೈಟ್ ನಲ್ಲಿ ಅಥವಾ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ ಜಿಲ್ಲಾ ಆಡಳಿತ ಭವನ ಕಟ್ಟಡ, ಹರಿಹರ ರೋಡ್ ದಾವಣಗೆರೆ ಇವರಿಂದ ಪಡೆದು ಫೆ.20 ರ ಒಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ರೂ ನಂ.42 ಜಿಲ್ಲಾ ಆಡಳಿತ ಭವನ ಕಟ್ಟಡ, ಹರಿಹರ ರೋಡ್ ದಾವಣಗೆರೆ ಇವರಿಗೆ ಸಲ್ಲಿಸಬೇಕು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಜನರಿಗೆ ಮತ್ತು ಯುವತಿಯರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08192-263122ಕ್ಕೆ ಸಂಪರ್ಕಿಸಬಹುದೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version