ದಿನದ ಸುದ್ದಿ
ಆನ್ಲೈನ್ ಶಿಕ್ಷಣ ಬೇಕೋ..? ಬೇಡವೋ..?
- ಸಂಗಮೇಶ ಎನ್ ಜವಾದಿ
ಕರೋನಾ ಎಂಬ ಮಹಾಮಾರಿಯ ಹಾವಳಿಯಿಂದ ಲಕ್ಷಾಂತರ ಜನರು ಇನ್ನು ಆತಂಕ ಸ್ಥಿತಿಯಲ್ಲಿ ಇದ್ದಾರೆ. ಜೊತೆಗೆ ಹಲವಾರು ಸಮಸ್ಯೆಗಳು ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಮಕ್ಕಳ ಸ್ಥಿತಿಯಂತು ಹೇಳತೀರದು ಎನ್ನಬಹುದು. ಈಗ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಅಂದರೆ ಅವರ ಶಿಕ್ಷಣದ ಉನ್ನತಿಗಾಗಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ ಎನ್ನಬಹುದು.
ಆದರೆ ಈಗ ಸಧ್ಯ ಶಾಲೆಗಳಿಗೆ ಮಕ್ಕಳು ಹೋಗುವಂತಿಲ್ಲ.ಒಂದು ವೇಳೆ ಶಾಲೆಗಳಿಗೆ ತೆರಳಿ ಒಂದೇ ಕಡೆ ಮಕ್ಕಳು ಸೇರಿದರೇ, ಕೊರೋನಾ ಹಾವಳಿ ಹೆಚ್ಚಾಗುವದಂತು ಖಂಡಿತಾ ಹಾಗಾಗಿ ಕೊರೋನಾ ಹಾವಳಿ ಹೆಚ್ಚಾಗಬಹುದೆಂಬ ಭಯದ ಹಿನ್ನೆಲೆಯಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ
ಆನ್ಲೈನ್ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ.
ಆದರೆ ಈ ಆನ್ಲೈನ್ ಶಿಕ್ಷಣ ವ್ಯವಸ್ಥೆಯಿಂದ
ಮಕ್ಕಳ ಅಧ್ಯಯನದ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಶಿಕ್ಷಣ(ಅಭ್ಯಾಸ)ದ ಪ್ರಭಾವ ಬೀರುತ್ತದೆ ಎಂಬುದು ಈಗಿರುವ ಮುಖ್ಯ ಪ್ರಶ್ನೆ ಜೊತೆಗೆ ಬಡ ಕುಟುಂಬದ ಮಕ್ಕಳ ಸ್ಥಿತಿಗತಿ, ಅವರ ಆರ್ಥಿಕ ಪರಿಸ್ಥಿತಿ ಹೇಗೆ ಎನ್ನುವುದು ಸೇರಿದಂತೆ ನೂರಾರು ಪ್ರಶ್ನೆಗಳು ಸಹಜವಾಗಿಯೇ ನಮ್ಮನ್ನು ಕಾಡುತ್ತಿವೆ ಮತ್ತು ಘಾಸಿಗೊಳಿಸುತ್ತಿವೆ.ಈ ನಿಟ್ಟಿನಲ್ಲಿ ಆನ್ಲೈನ್ ಶಿಕ್ಷಣ ಬೇಕೋ ಬೇಡವೋ ಎನ್ನುವ ಶೀರ್ಷಿಕೆ ಬಳಸಿಕೊಂಡು ಈ ಚಿಕ್ಕ ಲೇಖನ ಬರೆಯುವ ಕಾಯಕ ಮಾಡಿರುತ್ತೇನೆ.ಹಾಗಾಗಿ ತಮ್ಮ ಮುಂದೆ ಈ ಲೇಖನ ತರುವ ಪುಟ್ಟ ಪ್ರಯತ್ನ ನಮ್ಮದಾಗಿದೆ.
ಈ ಹಿನ್ನೆಲೆಯಲ್ಲಿ ಈಗ ಎಲ್ಲೆಡೆ ಆನ್ಲೈನ್ ಕ್ಲಾಸ್ ಗಳು ಪ್ರಾರಂಭವಾಗಿವೆ. ಆಯಾ ವಿಷಯಕ್ಕೆ ತಕ್ಕಂತೆ ದಿನಾಲೂ ಶಿಕ್ಷಕಿಯರು – ಶಿಕ್ಷಕರು ಪಾಠ ಮಾಡುತ್ತಿದ್ದಾರೆ.ಮಕ್ಕಳು ಆನ್ಲೈನ್ ಕ್ಲಾಸ್ನನಲ್ಲಿಯೇ
ಪಾಠಗಳನ್ನು ಕೇಳಿ ಮನೆಯಲ್ಲಿಯೇ ಅಭ್ಯಾಸ ಮಾಡಬೇಕು. ಶಾಲೆಯಲ್ಲಿ ಪಾಠ ಮಾಡುವಾಗ ಶಿಕ್ಷಕರು ಮಕ್ಕಳ ಮನಸ್ಸನ್ನು ಸೆರೆ ಹಿಡಿಯಲು ಪಾಠ ಬೋಧನೋಪಕರಣಗಳ ಜೊತೆಗೆ ನಾನಾ ತರಹದ ಸರ್ಕಸ್ಸುಗಳನ್ನು ಮಾಡುತ್ತಿರುತ್ತಾರೆ.
ಆದರೂ ಕೂಡ ಕೆಲವು ವಿದ್ಯಾರ್ಥಿಗಳು ಪಾಠಗಳನ್ನು ಕೇಳುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಹಾಗೂ ಮತ್ತೊಂದು ಕಡೆ ಬಡತನದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಬಡವರ ಹತ್ತಿರ ಮೊಬೈಲ್ ಇಲ್ಲದೇ ಇರಬಹುದು. ಇದ್ದರೂ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ. ಇದರಿಂದ ಆನ್ಲೈನ್ ಶಿಕ್ಷಣ ಎಲ್ಲರಿಗೂ ತಲುಪುವುದು ಕಷ್ಟವಾಗಬಹುದೆಂಬ ಅನುಮಾನ ಕೆಲ ಪೂಷಕರಲ್ಲಿ ಕಾಣುತ್ತವೆ.ಆದ್ದರಿಂದ ಹಿಗಿದ್ದ ಮೇಲೂ ಮಕ್ಕಳ ಮೇಲೆ ಈ ಶಿಕ್ಷಣ ಯಾವ ರೀತಿ ಪ್ರಭಾವ ಬೀರುತ್ತದೆಯೇ ಎಂಬುದು ಬರುವ ದಿನಮಾನಗಳಲ್ಲಿ ಕಾಣಬಹುದು.
ಇನ್ನೂ ನನ್ನ ಪ್ರಕಾರ ಹೇಳುವುದಾದರೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವುದು ಸೂಕ್ತವಲ್ಲ. ಏಕೆಂದರೆ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಅಷ್ಟು ಚೆನ್ನಾಗಿ ಶಿಕ್ಷಕರು ಪಾಠ ಮಾಡಿದರು ಸಹ ಮಕ್ಕಳಿಗೆ ಆ ಪಾಠವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗುವಾಗ,ಇಂತಹ ಸಮಯದಲ್ಲಿ ಈಗ ಆನ್ಲೈನ್ ಪಾಠ ತಿಳಿದುಕೊಳ್ಳುತ್ತಾರೆಯೇ ಎನ್ನುವುದು ನಮ್ಮ ದೊಡ್ಡ ಯಕ್ಷ ಪ್ರಶ್ನೆ ? ಇದು ಒಂದು ಕಡೆಯಾದರೆ ಆನ್ಲೈನ್ ಕ್ಲಾಸ್ ಕೇಳಲು ಫೋನ್ ಮತ್ತು ಲ್ಯಾಪ್ಟಾಪ್ ಗಳ ಅವಶ್ಯಕತೆ ಇದೆ ಎನ್ನುವುದು ಸುಳ್ಳಲ್ಲ.
ಆದರೆ ಎಲ್ಲ ಪೋಷಕರು ಶ್ರೀಮಂತರಾಗಿರುವುದಿಲ್ಲ ಎನ್ನುವುದಂತು ನೂರಕ್ಕೆ ನೂರರಷ್ಟು ನಿಜ. ನಿಜವಾದರೆ ಅಂತಹ ಬಡ ವಿದ್ಯಾರ್ಥಿಗಳಿಗೆ ಫೋನ್ ಮತ್ತು ಲ್ಯಾಪ್ಟಾಪ್ ಗಳನ್ನು ಖರೀದಿಸಲು ಸಾಧ್ಯವಿಲ್ಲ ಅಂದ ಮೇಲೆ ಅಂತಹವರಿಗೆ ಆನ್ಲೈನ್ ಕ್ಲಾಸ್ ನಿಂದ ಅವರಿಗೇನು ಪ್ರಯೋಜನ ಎಂಬುದು ಇನ್ನು ಅರ್ಥವಾಗದೆ ಇರುವ ಮಾತು. ಅಂದರೆ ಇದು ಕೇವಲ ಉಳ್ಳುವವರಿಗೆ ಮಾತ್ರ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಹಿಗಾದಾಗ ಶ್ರೀಮಂತರು ಮಾತ್ರ ಪಾಠ ಕೇಳಬೇಕೆ? ಎನ್ನುವ ಪ್ರಶ್ನೆ ಕೆಲ ಬಡವರಲ್ಲಿ
ಮೂಡುತ್ತದೆ.
ಇದಲ್ಲದೆ ಚಿಕ್ಕಮಕ್ಕಳಂತೂ ಮನೆಯಲ್ಲಿ ಮೊಬೈಲ್ ದಾಸರಾಗಿಬಿಟ್ಟಿದ್ದಾರೆ. ಆನ್ಲೈನ್ ಕ್ಲಾಸ್ ಇದೆಯಂತ ಹೇಳಿ ವಿಡಿಯೋ ಗೇಮ್ ಗಳನ್ನು ಆಡುವುದೇ ಜಾಸ್ತಿ.ಒಂದಿಬ್ಬರು ಸೇರಿದರೆ ಇಡೀ ದಿನ ಆಟಆಡುವುದರಲ್ಲೆ ಮಗ್ನನಾಗಿರುತ್ತಾರೆ.ಒಂದೆಡೆ ಕೂತು ಆನ್ಲೈನ್ ಕ್ಲಾಸ್ ಕೇಳುವುದು ಇವರಿಗೆ ಕಷ್ಟವಾಗಬಹುದು. ಹಾಗೂ ಹೋಮ್ ವರ್ಕ್ ಮಾಡಲು ಕಿರಿಕಿರಿ ಮಾಡುತ್ತಾರೆ. ಅದರಿಂದ ಮಕ್ಕಳ ಪಾಲಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಾಗುವುದು ಸುಳ್ಳಲ್ಲ.
ಅಲ್ಲದೆ ಹಳ್ಳಿಗಳಲ್ಲಿ ಇರುವ ಮಕ್ಕಳು ಹೊಲ ಮನೆ ಕೆಲಸ, ಕೂಲಿ ಕೆಲಸ ಇನ್ನೂ ಅನೇಕ ಕೆಲಸಗಳನ್ನು ಮಾಡುವುದರಿಂದ ಪೂಷಕರೂಂದಿಗೆ ದುಡಿಯಲು ಹೋಗುತ್ತಾರೆ. ಇದರಿಂದ ಇವರ ಶಿಕ್ಷಣ ಕಡಿತ ಗೊಳ್ಳುವ ಸಂಬಂಧ ಎದುರಾಗಬಹುದು.
ಆದ್ದರಿಂದ ಹಳ್ಳಿಗಳಲ್ಲಿ ದುಡಿಮೆಯೇ ದೇವರು ಎಂದುಕೊಂಡವರು ಶಾಲೆಗಳ ಕಡೆಗೆ ಅಷ್ಟಾಗಿ ಒತ್ತು ಕೊಡುವುದಿಲ್ಲ. ಕರೋನಾದಿಂದ ಕೆಲಸ ಹುಡುಕಿ ಹೊಟ್ಟೆ ತುಂಬಿಸಿಕೊಳ್ಳುವುದೇ ಅನಿವಾರ್ಯವಾಗಿದೆ. ಇನ್ನು ಅವರ ಹತ್ತಿರ ಎಲ್ಲಿಂದ ಬರಬೇಕು ಸ್ಮಾರ್ಟ್ ಫೋನ್ ಗಳು? ಸ್ಮಾರ್ಟ್ ಫೋನ್ ಗಳು ಇದ್ದರೂ ಕೂಡ ಅತಿಯಾಗಿ ಮೊಬೈಲ್ ನೋಡುವುದರಿಂದ ಮಕ್ಕಳ ಕಣ್ಣಿನ ದೃಷ್ಟಿಯ ಮೇಲೆ ಹೆಚ್ಚು ಹಾನಿಯಾಗುತ್ತದೆ. ಶಿಕ್ಷಕರು ನೋಟ್ಸ ಕಳಿಸಿದ್ದರೆ ಅವುಗಳನ್ನು ಪ್ರತಿ ಶಬ್ದಕ್ಕೂ ಝೂಮ್ ಮಾಡಿ ನೋಡುವುದು ಕಷ್ಟದ ಕೆಲಸ.
ಇದರಿಂದ ಬರೆದುಕೊಳ್ಳಲು ಕೂಡ ಬೇಸರವಾಗುತ್ತದೆ. ಶಿಕ್ಷಕರು ಪಾಠವನ್ನು ವಿವರಿಸುತ್ತಾ ಹೋಗುತ್ತಾರೆ.ತಿಳಿಯದಿದ್ದರೆ ಮರಳಿ ಕೇಳಿ ತಿಳಿದುಕೊಳ್ಳುವ ಹಾಗಿಲ್ಲ. ಅದೇರೀತಿ ಗಣಿತವು ಕೂಡ ಲೆಕ್ಕಗಳನ್ನು ಬಿಡಿಸುವುದರಿಂದ ಅರ್ಥವಾಗುತ್ತದೆ. ತಿಳಿಯದಿದ್ದರೆ ವಾಪಸ್ ಕೇಳುವ ಹಾಗಿಲ್ಲ ಅಂದ ಮೇಲೆ ಈ ಆನ್ಲೈನ್ ಶಿಕ್ಷಣದಿಂದ ಏನು ಪ್ರಯೋಜನ ಅಲ್ಲವೇ ?
ಒಟ್ಟಾರೆಯಾಗಿ ಕರೋನ ಬಂದ ಕಾರಣ ಕಡ್ಡಾಯವಾಗಿ ಆನ್ಲೈನ್ ಕ್ಲಾಸ್ ಬೇಕೆ ಬೇಕು ಎಂತೇನಿಲ್ಲ. ಸ್ವಲ್ಪ ದಿನ ವಿದ್ಯಾಭ್ಯಾಸವನ್ನು ಮುಂದುಡಿದರೆ ನಷ್ಟವೇನಿಲ್ಲ.ಆನ್ಲೈನ್ ಶಿಕ್ಷಣದಿಂದ ಎಷ್ಟು ದುಷ್ಪರಿಣಾಮವೆಂದರೆ ಮಕ್ಕಳಿಗೆ ಮೊಬೈಲ್ ಚಟವನ್ನು ಹಿಡಿಸಿ ಬಿಡುತ್ತದೆ. ಹಾಗಂತ ನಾನು ಆನ್ಲೈನ್ ಶಿಕ್ಷಣವನ್ನು ತೆಗೆಳುತ್ತಿಲ್ಲ. ಶಿಕ್ಷಣವು ಮಕ್ಕಳ ಜೀವನದಲ್ಲಿ ಅತ್ಯಂತ ಮುಖ್ಯಪಾತ್ರವನ್ನು ವಹಿಸುತ್ತದೆ. ಆದರೆ ಆನ್ಲೈನ್ ಶಿಕ್ಷಣದಿಂದ ಮಕ್ಕಳ ಬುದ್ಧಿಯಂತು ಚುರುಕು ಮಾಡುವುದಿಲ್ಲ.
ಮಕ್ಕಳನ್ನು ಮಬ್ಬಾಗಿಸಿ ಬಿಡುತ್ತದೆ ಮತ್ತು ಕಣ್ಣಿಗೆ ಹಾನಿಯನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ. ಇನ್ನು ಕೆಲವೊಂದು ವಿಷಯಗಳನ್ನು ನೋಟ್ಸ್ ಮಾಡಿ ಹೇಗೋ ಓದಿ ಕಂಟಪಾಠ ಮಾಡಬಹುದು. ಆದರೆ ಗಣಿತವನ್ನು ಕಂಟಪಾಠ ಮಾಡಲಾಗುವುದಿಲ್ಲ. ಆನ್ಲೈನ್ ಕ್ಲಾಸಿನಲ್ಲಿ ಅರ್ಥ ಆಗುವುದಿಲ್ಲ. ತರಗತಿಯಲ್ಲಾದರೆ ಎಲ್ಲಾ ವಿದ್ಯಾರ್ಥಿಗಳ ಗಮನ ಪಾಠದ ಮೇಲಿರುತ್ತದೆ ಮತ್ತು ಅವರೆಲ್ಲರ ಉದ್ದೇಶ ಪಾಠ ಕೇಳುವುದಾಗಿರುತ್ತದೆ.
ಆದರೆ ಮನೆಯಲ್ಲಿ ಹಾಗಲ್ಲ ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ತೊಡಗಿರುವಾಗ ಆನ್ಲೈನ್ ಕ್ಲಾಸ್ ಮೇಲೆ ವಿದ್ಯಾರ್ಥಿಗಳಿಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ.ಇನ್ನೊಂದು ಇಲ್ಲಿ ಅತಿ ದೊಡ್ಡ ನಷ್ಟ ಏನು ಗೊತ್ತೆ? ಕೆಲವೊಂದು ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯವಿರುತ್ತದೆ, ಫೋನ್ ಇರುತ್ತೆ, ಇಂಟರ್ನೆಟ್ ಇರುತ್ತೆ ಆನ್ಲೈನ್ ಪಾಠ ಕೇಳಲು ಎಲ್ಲಾ ಸೌಲಭ್ಯವಿರುತ್ತದೆ ಆದರೆ ಅವರು ಅದನ್ನು ಬೇರೆ ಕಾರ್ಯಕ್ಕೆ ಬಳಸಲುಬಹುದು.
ಇದರ ಬಗ್ಗೆ ಸಹ ಎಚ್ಚರ ವಹಿಸುವುದು ಅನಿವಾರ್ಯವಾಗುತ್ತದೆ ಜೊತೆಗೆ ಮೊಬೈಲಿನ ಚಟವನ್ನು ಹತ್ತಿಕೊಂಡು ಬಿಡುತ್ತದೆ ಮತ್ತು ಅದನ್ನು ನೋಡಿ ನೋಡಿ ಮಾನಸಿಕವಾಗಿ ಬಳಲುತ್ತಿರುವ ವಿದ್ಯಾರ್ಥಿಗಳನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ ಅಲ್ಲವೇ ? ಹಾಗಾಗಿ
ಮಕ್ಕಳಿಗೆ ಆನ್ಲೈನ್ ಶಿಕ್ಷಣ ಅಷ್ಟು ಪರಿಣಾಮಕಾರಿಯಲ್ಲ ಎಂಬುದು ನನ್ನ ಅನಿಸಿಕೆ ಜೊತೆಗೆ ಈ ಆನ್ಲೈನ್ ಶಿಕ್ಷಣದಿಂದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಗೌರವ ಕಡಿಮೆಯಾಗಬಹುದು ಭಾವನೆಯೊಂದಿಗೆ ಹೀಗೆ ಹತ್ತು ಹಲವು ಸಮಸ್ಯೆಗಳು ಆನ್ಲೈನ್ ಶಿಕ್ಷಣದಲ್ಲಿ ಕಾಣಬಹುದಾಗಿದೆ.
ಆದ್ದರಿಂದ ಇಂತಹ ಆನ್ಲೈನ್ ಶಿಕ್ಷಣದ ವ್ಯವಸ್ಥೆಯಿಂದ ಮಕ್ಕಳ ಭವಿಷ್ಯ ಹೇಗೆ ಬೆಳಗಬಹುದು ಎಂಬುದು ಯೋಚಿಸಬೇಕಾಗಿದೆ. ಹಾಗಾಗಿ ಈಗ ಈ ವ್ಯವಸ್ಥೆಯಿಂದ ಉಪಯುಕ್ತವಾಗದೇ ಅನಾನೂಕುಲ ಹೆಚ್ಚು ವಾಗಬಹುದು.ಇದರಿಂದ ಯಾರಿಗೂ ನೆಮ್ಮದಿ ಖಂಡಿತಾ ಸೀಗುವುದಿಲ್ಲ. ಶಾಲೆಗಳಲ್ಲಿ ಶಿಸ್ತು ಕ್ರಮ ತೆಗೆದುಕೊಂಡು ಎಲ್ಲರನ್ನೂ ಒಂದು ಕಡೆ ಸೇರಿಸಿ ಪಾಠ ಮಾಡುವರು.ಮಾಡುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ.
ಆದ್ದರಿಂದ ಆನ್ಲೈನ್ ಶಿಕ್ಷಣ ಬೇಕೂ,ಬೇಡವೂ ಎಂಬುದು ಯೋಚನೆ ಮಾಡುವ ಸಂಧರ್ಭ ಸಧ್ಯ ಇಂದು ಎದುರಾಗಿದೆ. ಸಂಬಂಧ ಪಟ್ಟವರು ಈ ಕುರಿತು ಒಳ್ಳೆಯ ನಿರ್ಧಾರ ಕೈಗೊಳ್ಳುವುದು ಅವಶ್ಯಕತೆ ಇದೆ. ಸಧ್ಯದ ಪರಿಸ್ಥಿತಿಯ ಬಗ್ಗೆ ಮಾತ್ರ ಯೋಚಿಸದೇ ವಿದ್ಯಾರ್ಥಿಗಳ ಮುಂದಿನ ಜೀವನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬುದು ಸರ್ವರೂ ಅರಿತುಕೊಳ್ಳುವುದು ಅತ್ಯುತ್ತಮ.
ಸುದ್ದಿದಿನ.ಕಾಂ|ವಾಟ್ಸಾಪ್|9980346243