ಸಿನಿ ಸುದ್ದಿ

“ಯಬಸ್” ಹಂಗಂದ್ರೆ ಏನಪ್ಪಾ..? ಭಟ್ರೇ ಕೊಡ್ಬೇಕು ಉತ್ರ ಅಂತಿದಾನೆ ಪ್ರೇಕ್ಷಕ ಪ್ರಭು..!

Published

on

ಸುದ್ದಿದಿನ ಡೆಸ್ಕ್ : ನಿರ್ದೇಶಕ ಯೋಗರಾಜ್ ಭಟ್ಟರ ‘ಪಂಚತಂತ್ರ’ ಸಿನೆಮಾ ಹಾಡುಗಳ ಮೂಲಕವೇ ಭಾರೀ ಸೌಂಡು ಮಾಡ್ತಿದೆ. ಈ ಸಿನೆಮಾದ ರೊಮ್ಯಾಂಟಿಕ್ ಹಾಡು “ಶೃಂಗಾರದ ಹೊಂಗೆ ಮರ” ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದೇ ಆಗಿದ್ದು ಎಲ್ಲರ ಬಾಯಲ್ಲೂ ಅದೇ ಹಾಡಿನ ಗುನುಗು. ಅಷ್ಟರಮಟ್ಟಿಗೆ ಭಟ್ಟರ ಸಾಹಿತ್ಯ, ವಿ.ಹರಿಕೃಷ್ಣ ಅವರ ಸಂಗೀತ ಹುಚ್ಚು ಹಿಡಿಸಿ ಬಿಟ್ಟಿದೆ.

ಹಾಗೆಯೇ ಈ ಸಿನೆಮಾದ ಮತ್ತೊಂದು ಹಾಡನ್ನು ಮೊನ್ನೆಯಷ್ಟೇ ಬಿಡುಗಡೆಮಾಡಿರುವ ಚಿತ್ರತಂಡಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ, ತಲೆಯೊಳಗೆ ಹುಳನೂ ಬಿಟ್ಕೊಂಡಿದಾನೆ. “ಈ ವಯಸಲ್ಲೇನ್ ಮಾಡೋದು ಗೊತ್ತಾಗೋದಿಲ್ಲ” ಅನ್ನೋ ಹಾಡಲ್ಲಿ ಬರೋ ‘ಯಬಸ್’ ಎಂಬ ಪದಕ್ಕೆ ಅರ್ಥ ಹುಡುಕಿ ಹುಡುಕೀ ಕಂಗಾಲಾಗಿದ್ದಾನೆ ಪ್ರೇಕ್ಷಕ. ಈ ಪದಕ್ಕೆ ಭಟ್ರೆ ಉತ್ರ ಕೊಟ್ರೆ ಒಳ್ಳೇದು ಅಂತಾನೆ ಪ್ರೇಕ್ಷಕ.ಹಾಗೇ ಈ ಸಿನೆಮಾದ ಎರಡೂ ಹಾಡುಗಳ ಟಿಕ್ ಟಾಕ್ ಕೂಡಾ ಭಾರೀ ಜೋರಿದೆ.

ಅಂದಹಾಗೆ ಪ್ರೇಕ್ಷಕ ಅಷ್ಟೊಂದ್ ಯಾಕೆ ತಲೆ ಕೆಡುಸ್ಕೊಂಡಿದಾನೆ ಅಂತ ನೀವೂ ನೋಡಿ ಮಜಾ ಇದೆ.

https://www.facebook.com/133083670806619/posts/350350292413288/

https://www.facebook.com/133083670806619/posts/350655122382805/

https://www.facebook.com/133083670806619/posts/350693519045632/

https://www.facebook.com/133083670806619/posts/350718159043168/

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version